ಒಮ್ರಿಕಾನ್ ವೈರಸ್ ನಿಯಂತ್ರಣ ಮಾಡಲು ಸಿದ್ದವಾಗಿರಿ – ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ

JANANUDI.COM NETWORK


ಕೋವಿಡ್ ಸೋ0ಕಿನ ರೂಪಾ0ತರ ವೈರಸ್ ಆದ ಓಮಿಕ್ರಾನ್ ಜಿಲ್ಲೆಯಲ್ಲಿ ಹರಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ ಈ ಹಿ0ದೆ ಕೋವಿಡ್ ಅಲೆಗಳನ್ನು ನಿಯಂತ್ರಿಸಲು ರಚಿಸಿರುವ ಸಮಿತಿಗಳನ್ನು ಪುನಾರಾರ0ಭಿಸಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವ0ತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಸೂಚಿಸಿದರು.ಅವರು ಬುಧವಾರ ಸ0ಜೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ, ಜಿಲ್ಲೆಯಲ್ಲಿ
ಓಮಿಕ್ರನ್ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ
ಕುರಿತು ನಡೆದ ವರ್ಚುವಲ್ ಮಿಟಿಂಗಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ವಿಶ್ವದ 11 ದೇಶಗಳಲ್ಲಿ ಹೊಸ ರೂಪಾ0ತರಿ ತಳಿಯಾದ ಓಮಿಕ್ರಾನ್
ವ್ಯಾಪಕವಾಗಿ ಹರಡಿದ್ದು, ವಿದೇಶಿ ಪ್ರಯಾಣಿಕರಿ0ದ ರಾಜ್ಯದಲ್ಲಿ ಸಹ ಹರಡುವ
ಸಾಧ್ಯತೆಗಳಿದ್ದು, ಹೊಸ ತಳಿಯು ಹರಡುವ ವೇಗವು ಹೆಚ್ಚಿರುವ ಹಿನ್ನಲೆ,
ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅವಶ್ಯವಾಗಿದೆ ಎ0ದರು.
ಓಮಿಕ್ರಾನ್ ದೃಡಪಟ್ಟ ರಾಷ್ಟ್ರಗಳಿ0ದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು
ತಪ್ಪದೇ ಪರೀಕ್ಷೆಗೆ ಒಳಪಡಿಸಬೇಕು. ಒಂದೊಮ್ಮೆ ಅವರ ಪರೀಕ್ನಾ ವರದಿಯು
ನೆಗೆಟಿವ್ ಬ0ದಲ್ಲಿ ಅವರನ್ನು 7 ದಿನಗಳ ಹೋಂ0 ಕ್ಹಾರ0ಟೈನ್ ಮಾಡಬೇಕು.
ಪಾಸಿಟಿವ್ ಬ0ದಲ್ಲಿ ಅವರುಗಳನ್ನು 14 ದಿನಗಳ ಕಾಲ ಸಾ0ಸ್ಥಿಕ ಐಸೋಲೇಶನ್/
ಆಸ್ಪತ್ರೆಗೆ ದಾಖಲಿಸಬೇಕು ಎ0ದ ಅವರು, ಕಳೆದ 15 ದಿನಗಳಿ0ದ ಜಿಲ್ಲೆಗೆ
ವಿದೇಶದಿ0ದ ಬ0ದಿರುವವರ ಮಾಹಿತಿಗಳನ್ನು, ಮ0ಗಳೂರು ಹಾಗೂ ಬೆ0ಗಳೂರು
ವಿಮಾನ ನಿಲ್ದಾಣಗಳಿ0ದ ಪಡೆದು, ಅವರುಗಳನ್ನು ಪರೀಕ್ಷೆಗೆ ಒಳಪಡಿಸಬೇಕು
ಎ0ದರು.
ಜನ ಸಾಮಾನ್ಯರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅ0ತರ ಕಾಪಾಡುವುದು, ಕೈ
ತೊಳೆಯುವುದು ಸೇರಿದಂತೆ ಕೋವಿಡ್ನ ಸರಳ ಮಾರ್ಗಸೂಚಿಗಳನ್ನು ತಪ್ಪದೇ
ಪಾಲನೆ ಮಾಡಬೇಕು. ತಮ್ಮ ನೆರೆ ಹೊರೆಯವರು ವಿದೇಶದಿ0ದ ಬಂದಿದ್ದಲ್ಲಿ ಅವರ
ಮಾಹಿತಿಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎ0ದರು.
ಮು0ದಿನ ದಿನಗಳಲ್ಲಿ ಸೋಂಕು ಹೆಚ್ಚಾದಲ್ಲಿ ಅವುಗಳ ನಿರ್ವಹಣೆಗೆ ಅಗತ್ಯವಿರುವ
ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು.
ಕೋವಿಡ್ ಕೇರ್ ಸೆ0ಟರ್ ಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಿ ಅಗತ್ಯ
ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಚಿಕಿತ್ತೆಗೆ ಹಾಸಿಗೆಗಳ ಕೊರತೆಯಾಗದಂತೆ
ಮಾಹಿತಿಗಳನ್ನು ಹಾಗೂ ಹಾಸಿಗೆಗಳ ಲಭ್ಯತೆಗಳ ಬಗ್ಗೆ ಈಗಲೇ ಖಾಸಗಿ ಆಸ್ಪತ್ರೆಗಳಿಗೆ
ಭೇಟಿ ನೀಡಿ, ಪರಿಶೀಲಿಸಿ ಆಕ್ಸಿಜನ್ ಸಹಿತಿ/ರಹಿತ, ಐಸಿಯು ಹಾಸಿಗೆ ಹಾಗೂ
ಅವುಗಳ ನಿರ್ವಹಣಾ ಮಾಹಿತಿಯನ್ನು ಸ0ಬ0ಧಿಸಿದ ಸಮಿತಿಯವರು
ಸ0ಗ್ರಹಿಸಿಟ್ಟುಕೊಳ್ಳಬೇಕು ಎ0ದರು.
ಕೋವಿಡ್ ಪರೀಕ್ಷಾ ನಿರ್ವಹಣಾ ಸಮಿತಿಯು ಪತಿದಿನ ಕೋವಿಡ್ ಪರೀಕ್ಷೆಯ ಸ್ಟ್ಯಾಬ್ ಸಂಗ್ರಹವನ್ನು ಅದೇ ದಿನ ಮಧ್ಯಾನ್ಹ ಹಾಗೂ ಸಂಜೆಯ ಪಾಳಿಯಲ್ಲಿ ಟೆಸ್ಟ್ ಸೆಂಟರಿಗೆ ರವಾನಿಸಿ ಅಂದಿನ ಪರೀಕ್ಷೆಯ ವರದಿಯನ್ನು ಅಂದೇ ನೀಡುವಂತೆ ಕಾರ್ಯಚರಿಸಬೇಕು’ ಎಂದು ತಿಳಿಸಿದರು.