

ಬೀಜಾಡಿ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ 25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ”ದ ಸಡಗರ ಫೆಬ್ರುವರಿ 3 ರಿಂದ 5ರ ತನಕ ನಡೆಯಲಿದ್ದು, ಈ ಪ್ರಯುಕ್ತ ಸಂಸ್ಥೆಯ ಸಾಧನೆಯ ಛಾಯಾಚಿತ್ರದ ಸಂಚಿಕೆ ಅನಾವರಣ ಕಾರ್ಯಕ್ರಮ ಭಾನುವಾರ ನಡೆಯಿತು.
ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂಸ್ಥೆಯ ಸಾಧನೆಯ ಛಾಯಾಚಿತ್ರ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ ಮಿತ್ರಸಂಗಮ ಹತ್ತು ಹಲವು ಜನಪರ ಕಾರ್ಯಕ್ರಮ ಸಂಘಟಿಸಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ರಜತ ಮಹೋತ್ಸವ ಯಶಸ್ವಿಯಾಗಲಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಬೀಜಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಕಾರ್ಯದರ್ಶಿ ಬಿ.ರಾಜೇಶ್ ಆಚಾರ್ಯ ಬೀಜಾಡಿ, ರಜತ ಮಹೋತ್ಸವದ ಸಮಿತಿಯ ಕಾರ್ಯದರ್ಶಿ ಚಂದ್ರ ಬಿ.ಎನ್., ಉಪಾಧ್ಯಕ್ಷ ಅನುಪ್ ಕುಮಾರ್ ಬಿ.ಆರ್., ಸಂಚಾಲಕರಾದ ಸುಭಾಷ್ ಪುತ್ರನ್, ಗಿರೀಶ್ ಆಚಾರ್ಯ, ಗಣೇಶ್ ಐಶ್ವರ್ಯ, ಮಹೇಶ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು. ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ, ನಿರೂಪಿಸಿದರು.