


ಕೋಟ: ಬೀಜಾಡಿ ಗೋಪಾಡಿ ಮಿತ್ರ ಸಂಗಮದ 25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು ಬೆಳಕಿನ ಸಹಯಾನ ಫೆ. 03ರಿಂದ 05 ತನಕ ನಡೆಯಲಿದ್ದು, ಈ ಪ್ರಯುಕ್ತ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸೋಮವಾರ ಜರಗಿತು.
ಹೋಟೆಲ್ ಉದ್ಯಮಿ, ದಾನಿ ರಾಮಚಂದ್ರ ರಾವ್ ಮೂಡುಗೋಪಾಡಿ ಆಮಂತ್ರಣ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜಾನಕಿ ರಾಮಚಂದ್ರ ರಾವ್, ವೀಣಾಅನೂಪ್ ಕುಮಾರ್, ಮಿತ್ರ ಸಂಗಮದ ಉಪಾಧ್ಯಕ್ಷ ನಾಗರಾಜ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೀಜಾಡಿ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಗೋಪಾಡಿ, ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್, ಸಂಚಾಲಕ ಗಿರೀಶ್ ಕೆ.ಎಸ್, ಸಾಗರದ ಗಣೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.