![](https://jananudi.com/wp-content/uploads/2023/03/12-Iashvaraya-bijadi-4.jpg)
![](https://jananudi.com/wp-content/uploads/2023/03/WhatsApp-Image-2023-03-13-at-6.41.10-PM-1-1024x456.jpg)
ಮನುಷ್ಯ ಜೀವಿಯನ್ನು ಕಾಪಾಡುವ ದೊಡ್ಡ ಶಕ್ತಿ ನಾಗದೇವರಿಗಿದೆ. ಕರಾವಳಿ ಭಾಗದಲ್ಲಿ ನಾಗದೇವರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟು ಆರಾಧನೆಯನ್ನು ಮಾಡಲಾಗುತ್ತದೆ. ಈ ನೆಲೆಯಲ್ಲಿ ಸೇವಾಕರ್ತರು ಮಾಡಿದ ಈ ಸೇವೆಯಿಂದ ಇಡೀ ಜಗತ್ತೇ ಲೋಕ ಕಲ್ಯಾಣವಾಗುವಂತೆ ನಾಗದೇವರು ಅನುಗ್ರಹಿಸಲಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ನುಡಿದರು.
ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವಾ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನವಾದ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಸೋಮವಾರ ಜರುಗಿದ ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾಮಿ೯ಕ ಉಪನ್ಯಾಸ ನೀಡಿ ಮಾತನಾಡಿ, ದೈವರಾಧನೆ ಮತ್ತು ನಾಗರಾಧನೆಯ ಹಿಂದೆ ಈ ಮಣ್ಣಿನ ಸೊಗಡಿದೆ. ಅವಿಭಜಿತ ಜಿಲ್ಲೆಗಳಲ್ಲಿ ಬಿಟ್ಟರೇ ಬೇರೆ ಜಿಲ್ಲೆಗಳಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಈ ಕ್ಷೇತ್ರಗಳೆಲ್ಲವೂ ದೇವಭೂಮಿ ಎನ್ನಬಹುದು ಎಂದರು.
![](https://jananudi.com/wp-content/uploads/2023/03/WhatsApp-Image-2023-03-13-at-6.41.10-PM-1024x510.jpg)
ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ, ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.
ಈ ಸಂದರ್ಭ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ಯಕ್ಷಗುರು ಕಡ್ಲೆ ಗಣಪತಿ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಂಡಿತ್ತು.
ಬಿ.ಆರ್.ಅರವಿಂದ್ ಕೋಟೇಶ್ವರ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ವಂದಿಸಿದರು.