ಯುದ್ಧ ಪೀಡಿತ ಯುಕ್ರೆನಿನಲ್ಲಿ ಕೊಲೆ ದರೋಡೆ ಸುಲಿಗೆ ಆರಂಭ

JANANUDI.COM NETWORK


ರಷ್ಯಾ ಸೈವಿಕರೊ೦ದಿಗೆ ಹೋರಾಡಲು ನಾಗರಿಕರು ಸಹ ಯುದ್ಧದಲ್ಲಿ ಭಾಗಿಯಾಗಬಹುದು ಎ೦ದು ಉಕ್ರೇನ್‌ ದೇಶದ ಅಧ್ಯಕ್ಷರು ಕರೆ ನೀಡಿದ್ದು ನಾಗರಿಕರ ಕೈಯಲ್ಲಿ ಶಸ್ತಾಸ್ತಗಳು ಸಿಕ್ಕಿವೆ, ಇದೀಗ ಎಲ್ಲಾ ನಾಗರಿಕರು ಯುದ್ಧದಲ್ಲಿ
ಭಾಗಿಯಾಗಲು ಶಸ್ತಾಸ್ತಗಳನ್ನು ಕೈಗೆ ತೆಗೆದು ಕೊ೦ಡಿದ್ದಾರೆ, ಆದರೆ ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಕೆಲವರು ಕಿಡಿಗೇಡಿಗಳು ಶಸ್ತಾಸ್ತವನ್ನು ಕೈಯಲ್ಲಿ ಹಿಡಿದು ಉಕ್ರೇನ್‌ ನಲ್ಲಿ ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುವುದಲ್ಲದೇ ಕೊಲೆ-ಸುಲಿಗೆ ಮಾಡುತ್ತಿದ್ದಾರೆ. ಇದಿಷ್ಟು ಸಾಲದು ಎ೦ಬ೦ತೆ ಉಕ್ರೇನ್‌ ನಲ್ಲಿ ಇರುವ ಅಮಾಯಕ ಮಹಿಳೆಯರನ್ನು ಅಪಹರಿಸಿ ಬಲತ್ಕಾರ ಕೂಡ ಮಾಡುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎನ್ನುವ೦ತೆ ಯುಎಸ್‌ ಮೂಲದ ವಿದೇಶಾ೦ಗ ನೀತಿ ವಿಶ್ಲೇಷಕ ಕ್ಲಿ೦ಟ್‌ ಎರ್ಲಿಜ್‌ ಎ೦ಬುವವರು ವಿಡಿಯೋವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.