ಬೀಜಾಡಿ: ಉಚಿತ ಮೂಳೆ ಆರೋಗ್ಯ ತಪಾಸಣಾ ಶಿಬಿರ

JANANUDI.COM NETWORK


ಬೀಜಾಡಿ: ಗ್ರಾಮೀಣ ಭಾಗದಲ್ಲಿ ಸಂಘ ಸಂಸ್ಥೆಗಳು ಸೇರಿಕೊಂಡು ಆರೋಗ್ಯ ಶಿಬಿರ ನಡೆಸಿದಾಗ ಒಂದಷ್ಟು ಮಂದಿ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಆ ಮೂಲಕ ಅವರ ಆರೋಗ್ಯ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕುತ್ತಾರೆ ಎಂದು ಶಿಕ್ಷಣತಜ್ಞೆ ಉಮಾಮೂರ್ತಿ ಹೇಳಿದರು.
ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಂಯುಕ್ತ ಆಶ್ರಯದಲ್ಲಿ ಝಂಡು ಫಾಮಸಿಟಿಕಲ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬೀಜಾಡಿ ಧ್ವನಂತರಿ ಕ್ಲಿನಿಕ್ ವೈದ್ಯ ಡಾ.ಕಿರಣ್ ಕಾಂಚನ್ ಅವರ ನೇತೃತ್ವದಲ್ಲಿ ನಡೆದ ಉಚಿತ ಮೂಳೆ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ವಹಿಸಿದ್ದರು.
ಈ ಶಿಬಿರದಲ್ಲಿ ಮೂಳೆಯ ಖನಿಜ ಸಾಂದ್ರತೆ ಪರೀಕ್ಷೆ, ಬೆನ್ನುನೋವು, ಆಥ್ರ್ರೈಟಿಸ್ ನೋವು, ಮೂಳೆಯ ಕ್ಯಾಲ್ಸಿಯಂ ಕೊರತೆ ಮೊದಲಾದ ಸಮಸ್ಯೆಗಳಿಗೆ ಪರೀಕ್ಷೆ ನಡೆಸಿ ಸಮಸ್ಯೆ ಕಂಡು ಬಂದವರಿಗೆ ಉಚಿತ ಔಷ ವಿತರಿಸಲಾಯಿತು. 97 ಮಂದಿ ಶಿಬಿರದ ಪ್ರಯೋಜನ ಪಡೆದರು.
ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ಬೀಜಾಡಿ ಧ್ವನಂತರಿ ಕ್ಲಿನಿಕ್ ವೈದ್ಯ ಡಾ.ಕಿರಣ್ ಕಾಂಚನ್, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಅಧ್ಯಕ್ಷ ಮಹೇಶ್ ಶೆಟ್ಟಿ,ಇನ್ನರ್‍ವೀಲ್ ಅಧ್ಯಕ್ಷೆ ಸೌಮ್ಯ ಶೆಟ್ಟಿ,ಬೀಜಾಡಿ ಮಿತ್ರ ಸಂಗಮದ ಕಾರ್ಯದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.
ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಸ್ವಾಗತಿಸಿದರು. ಉಪನ್ಯಾಸಕಿ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿದರು.