JANANUDI.COM NETWORK
ಪೋಲಿಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣರಿಗೆ ನಮ್ಮೂರ ಪ್ರಶಸ್ತಿ ಪ್ರದಾನ
ಬೀಜಾಡಿ: ಮಿತ್ರ ಸಂಗಮದಂತಹ ಸಂಸ್ಥೆ ಪ್ರತಿ ಊರಿನಲ್ಲೂ ಇದ್ದರೆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ. ಸಂಸ್ಥೆಯ ವತಿಯಿಂದ ಊರ ಗೌರವ ನಮ್ಮೂರ ಪ್ರಶಸ್ತಿಯನ್ನು ನೀಡಿರುವುದಕ್ಕೆ ನಾನು ಸಂಸ್ಥೆಗೆ ಅಬಾರಿಯಾಗಿದ್ದೇನೆ.
ಮಿತ್ರ ಸಂಗಮಕ್ಕೆ ಪೋಲಿಸ್ ಇಲಾಖೆಯ ಸಹಾಯ ಸಹಕಾರ ಸದಾ ಇದೆ ಎಂದು ಕುಂದಾಪುರ ಪೋಲಿಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಹೇಳಿದರು.
ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 24ನೇ ವಾರ್ಷಿಕೋತ್ಸವದಲ್ಲಿ ಊರ ಗೌರವ-ನಮ್ಮೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗೋಪಾಡಿ ಶ್ರೀ ಚಿಕ್ಕು ಅಮ್ಮ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಆನಂದ ಬಿಳಿಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೀಜಾಡಿ ಸಾಯಿರಾಂ ಫ್ಲೋರಿಂಗ್ ಮಾಲಿಕ ದೇವರಾಜ ಕೃಷ್ಣಪ್ಪ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು.ಸಂಸ್ಥೆಯ ಹಿರಿಯ ಸದಸ್ಯ ಶಂಕರನಾರಾಯಣ ಬಾಯರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಪ್ರಶಸ್ತಿ ಪುರಸ್ಕøತ ಕುಮಾರ್ ಕಾಂಚನ್, ಯಕ್ಷಗುರು ಸತ್ಯನಾರಾಯಣ ಆಚಾರ್ಯ, ಬೀಜಾಡಿ ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಮಿತ್ರ ಸಂಗಮದ ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್., ಶ್ರಮ ಸಮ್ಮಾನ್ ಪ್ರಶಸ್ತಿ ಪುರಸ್ಕøತ ನಾರಾಯಣ ಭಂಡಾರಿ ಅವರನ್ನು ಗುರುತಿಸಿ ಗೌರವಿಸಲಾಯಿತು. ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನ, ಅಶಕ್ತ ಕುಟುಂಬಕ್ಕೆ ಹೊಲಿಗೆ ಯಂತ್ರ, ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರ ಬಿ.ಎನ್ ವರದಿ, ಶ್ರೀಕಾಂತ ಭಟ್ ಸಂದೇಶ, ಅನುಪ್ ಕುಮಾರ್ ಬಿ.ಆರ್ ಸನ್ಮಾನ ಪತ್ರ, ರಾಜೇಶ್ ಆಚಾರ್ಯ, ವಿನಯ ಹೆಬ್ಬಾರ್ ಪ್ರತಿಭಾ ಪುರಸ್ಕøರದ ಪಟ್ಟ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಬಳಿಕ ಸ್ಥಳೀಯ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು,ಓಂಕಾರ ಕಲಾವಿದರು ಕಣ್ಣುಕೆರೆ ತೆಕ್ಕಟ್ಟೆ ಇವರಿಂದ ಕುಂದಾಪುರ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಿತು.