JANANUDI.COM NETWORK
ಬೀಜಾಡಿ:ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ
ಬೀಜಾಡಿ ಗೋಪಾಡಿ ಮಿತ್ರ ಸಂಗಮ ಹಾಗೂ ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಆಶ್ರಯದಲ್ಲಿ ಭಾನುವಾರ ರಾತ್ರಿ ಬೀಜಾಡಿ ಮಿತ್ರಸೌಧದ ಎದುರು ಭಾವಪೂರ್ಣವಾಗಿ ದೀಪ ನಮನ,ನುಡಿನಮನ,ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತ್ರಾಸಿ ಕರ್ಣಾಟಕ ಬ್ಯಾಂಕ್ ಪ್ರಬಂಧಕ ಮಂಜುನಾಥ ನುಡಿನಮನ ಸಲ್ಲಿಸಿ ಮಾತನಾಡಿ, ಪುನೀತ್ ಅವರು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಪ್ರೀತಿಸುವ ಗುಣವನ್ನು ಹೊಂದಿದ್ದರು. ಮಾನವೀಯ ಮೌಲ್ಯಗಳ ಸಾಕಾರಮೂರ್ತಿ ಎನಿಸಿದ ಅವರು ತಮ್ಮ ಬದುಕನ್ನೇ ಸೇವೆಗಾಗಿ ಅರ್ಪಿಸಿದ ಧೀಮಂತರು ಎಂದರು.
ಇದೇ ಸಂದರ್ಭದಲ್ಲಿ ದಿವ್ಯಾತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗಿಸಿ ಕಂಬನಿಗರೆದರು. ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಡಾ.ಕಿರಣ್ ಕಾಂಚನ್, ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಕೋಶಾಧಿಕಾರಿ ಅನುಪ್ ಕುಮಾರ್ ಬಿ.ಆರ್, ಲೆಕ್ಕಪರಿಶೋಧಕ ವೆಂಕಟೇಶ ನಾವುಂದ, ಬೆಳ್ಳಿ ಹಬ್ಬ ಸಮಿತಿಯ ಕೋಶಾಧಿಕಾರಿ ನಾಗರಾಜ್ ಬಿ.ಜಿ., ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ್ ಬೀಜಾಡಿ, ಕಾರ್ಯದರ್ಶಿ ವಿನಯ ಹೆಬ್ಬಾರ್, ಸಂಗಮ ಸ್ವಸಹಾಯ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಗೋಪಾಡಿ, ಕಾರ್ಯದರ್ಶಿ ಗಿರೀಶ್ ಕೆ.ಎಸ್ ಮೊದಲಾದವರು ಉಪಸ್ಥಿತರಿದ್ದರು.