ಬೆಡ್ ಗಾಗಿ ಲಂಚ ಪ್ರಕರಣ ಲೋಕಾಯುಕ್ತ ಪಿ.ವಿಶ್ವನಾಥ್ ಶೆಟ್ಟಿ ಸ್ವಯಂ ಪ್ರೇರಿತ ತನಿಕೆಗೆ ಆದೇಶ

JANANUDI.COM NETWORK

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಬೆಡ್ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ಗ್ಗೊಂಡಿದ್ದು ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತರು ಪೊಲೀಸರಿಗೆ ಆದೇಶ ನೀಡಿದ್ದಾರೆ.

    ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಶಾಸರಕಾರ ಸತೀಶ್ ರೆಡ್ಡಿ, ಉದಯ ಗರುಡಾಚಾರಾ ಹಾಗೂ ರವಿ ಸುಬ್ರಹ್ಮಣ್ಯ ಮಂಗಳವಾರ ವಿವಿಧ ವಾರ್ ರೂಂಗೆ ಭೇಟಿ ನೀಡಿ ಹಾಸಿಗೆಯನ್ನು ಹಣಕ್ಕಾಗಿ ಬ್ಲಾಕ್ ಮಾಡಿಡುವ ದಂಧೆಯನ್ನು ಬೆಳಕಿಗೆ ತಂದಿದ್ದರು. ಈ ಬಗ್ಗೆ ವಿವಿಧ ಪತ್ರಿಕೆಗಳು ವರದಿ ಪ್ರಕಟಿಸಿದ್ದು, ಪತ್ರಿಕಾ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.

    ಈಗಾಗಲೇ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದು, ಇದರೊಂದಿಗೆ ಲೋಕಾಯುಕ್ತ ಪೊಲೀಸರು ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಿದ್ದಾರೆ ಎಂದು ನ್ಯಾಯಮೂರ್ತಿಗಳು ವಿವರಣೆ ನೀಡಿದ್ದಾರೆ.

     ಈ  ಪ್ರಕಾರ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಆಯುಕ್ತರು, ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯಾಯುಕ್ತರು, ವಲಯ ಆಯುಕ್ತರು ಸೇರಿದಂತೆ ಒಟ್ಟು 31 ಜನರ ವಿರುದ್ಧ ಪ್ರಕರಣ ಲೋಕಾಯುಕ್ತರಿಂದ ದಾಖಲಿಸಿ ಕೊಳ್ಳಲಾಗಿದೆ.