ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬುವಿನ ಬಂದನ

JANANUDI.COM NETWORK


ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣ ಕಳೆದ ದಿನಗಳಲ್ಲಿ ಬಹಳ ಸದ್ದು ಮಾಡಿತ್ತು, ಇತರರು ತಪ್ಪಿದಸ್ತರಂತೆ ಕಾಣಿಸುವ ಯತ್ನನಡೆದು ಇದೀಗ ಯಾರು ಹಗರಣ ಬಯಲು ಮಾಡಲು ಹೊರಟಿದ್ದರೊ, ಅವರಲ್ಲೆ ಪಾತಕ ಕ್ರತ್ಯ ಇದೆಯೆಂದು ಪ್ರಕರಣ ತಿರುಗು ಬಾಣವಾಗಿ, ಬಿಜೆಪಿಯ ಶಾಸಕ ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಈ ಹಿಂದೆ ಬಾಬುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊರೊನಾ ಕಾರಣ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾಗುತ್ತಿದ್ದಂತೆ ಸಿಸಿಬಿ ಪೊಲೀಸರು ಬಾಬುರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡೆಸಿ, ಹೆಚ್ಚಿನ ವಿಚಾರಣೆಗೆ ತನ್ನ ಕಸ್ಟಡಿಗೆ ಪಡೆದುಕೊಂಡಿದೆ.
ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಮೊದಲು ಬಂಧನಕ್ಕೀಡಾಗಿದ್ದ ಮಹಿಳೆ, ಬಾಬು ಮೂಲಕ ಬೆಡ್ ಬ್ಲಾಕ್ ಮಾಡಿಸುತ್ತಿದ್ದಳು ಎಂದು ಗುಟ್ಟು ಬಿಟ್ಟಾಗ, ಇತನ ಬಂದನಕ್ಕೆ ಕಾರಣಾವಾಯಿತು. ಅದಲ್ಲದೆ ಬೊಮ್ಮನಹಳ್ಳಿ ವಾರ್ ರೂಮ್ ಸಿಬ್ಬಂದಿಯ ಹೇಳಿಕೆ, ಮತ್ತು ಅಲ್ಲಿನ ಸಿಸಿ ಟಿ.ವಿ. ಮಾಹಿತಿಗಳ ಆಧಾರದಲ್ಲಿ ಬಾಬುವನ್ನು ಬಂದಿಸಿದ್ದಾರೆಂದು ತಿಳಿದು ಬಂದಿದೆ.