ಶ್ರೀನಿವಾಸಪುರ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸುಂದರವಾದ ಬರವಣಿಗೆ ಅಗತ್ಯ. ಬರವಣಿಗೆಯಲ್ಲಿ ಸ್ಪಷ್ಟತೆ ಇಲ್ಲವಾದಲ್ಲಿ ಮೌಲ್ಯಮಾಪಕರಿಗೆ ಓದಲು ಸಾಧ್ಯವಾಗುವುದಿಲ್ಲ ಎಂದು ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಸ್ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸ್ಟ್ಯಾಂಡರ್ಡ್ ರೈಟಿಂಗ್ ಕಾಂಪಿಟಿಷನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರು ಹೇಳುವಂತೆ ಮಕ್ಕಳು ಸುಂದರ ಬರವಣಿಗೆ ಬರೆಯಲು ಸಾಧ್ಯವಾಗಲು, ಚಿತ್ರ ಕಲೆ ಕಲಿಸಬೇಕು. ಚಿತ್ರ ಬರೆಯುವುದನ್ನು ಕಲಿತ ಮಗು ಸುಂದರವಾದ ಬರವಣೆಗೆ ಬರೆಯಬಲ್ಲದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ವಿದ್ಯಾರ್ಥಿನಿಯರಿಗೆ ಸುಂದರ ಬರವಣಿಗೆ ಬರೆಯುವ ಬಗ್ಗೆ ಮಾರ್ಗದರ್ಶನ ನೀಡಿದರು. ಬಿಸ್ ಮೆಂಟರ್ ವೇಣುಗೋಪಾಲ್, ಉಪನ್ಯಾಸಕರಾದ ಎನ್.ವಾಸು, ಪಿ.ಎಸ್.ಮಂಜುಳ, ಮಂಜುನಾಥರೆಡ್ಡಿ, ವೀಣಾ, ಜಿ.ಕೆ.ನಾರಾಯಣಸ್ವಾಮಿ, ಗೋಪಾಲನ್, ಗೋಪಿನಾಥ್ ಇದ್ದರು.