ಶ್ರೀನಿವಾಸಪುರ : ಕನ್ನಡಬಾಷೆಯ ಬಗ್ಗೆ ಬಾಷಾಭಿಮಾನವಿರಲಿ ಆದರೆ ದುರಾಭಿಮಾನಬೇಡ ದೀಪದಿಂದ ದೀಪ ಬೆಳಗುವಂತೆ ಕನ್ನಡ ಭಾಷೆ ಪ್ರಪಂಚದಾದ್ಯಂತ ಪಸರಿಸಲಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಇದನ್ನು ಉಳಿಸಿ ಬೆಳಸುವ ಹೊಣಗಾರಿಕೆ ನಮ್ಮಲ್ಲೆರ ಮೇಲಿದೆ ಎಂದು ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಹೇಳಿದರು.
ತಾಲೂಕಿನ ರೋಣುರು ಕ್ರಾಸ್ನ ವಿಐಪಿ ಶಾಲೆಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಭಾಷೆಯು ಮನೆ ಮಾತು ಆಗಬೇಕು. ಬೇರೆ ಬಾಷೆಯೊಂದಿಗೆ ಅಭಿಮಾನ ಇರಬೇಕು, ಕನ್ನಡ ಬಾಷೆಯ ಬಗ್ಗೆ ಹೆಚ್ಚು ಅಭಿಮಾನ ಇರಬೇಕು. ಪ್ರತಿ ದಿನ ಕನ್ನಡ ಬಾಷೆಯನ್ನ ಓದಬೇಕು, ಬರೆಯಬೇಕು ಆಗ ಬಾಷೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು. ತಮಿಳಿನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿನ ಜನತೆ ಬಾಷಾಭಿಮಾನವು ಜಾಸ್ತಿ ಅಲ್ಲಿ ನಮ್ಮ ಬಾಷೆ ಗೊತ್ತಿದ್ದರೂ ಸಹ ನಮ್ಮ ಬಾಷೆಯಲ್ಲಿ ಮಾತನಾಡುವುದಿಲ್ಲ. ನಾವು ತುಂಬಾ ಸಹೃದಯರು ಬೇರೆ ಬಾಷೆಯವರಿಗೆ ನಮ್ಮ ಬಾಷೆ ಗೊತ್ತಿಲ್ಲದ ಸಮಯದಲ್ಲಿ ಅವರ ಬಾಷೆಯಲ್ಲಿ ಮಾತನಾಡುತ್ತೇವೆ ಎನ್ನುತ್ತಾ, ಯಾವುದೇ ಏನೇ ಆಗಲಿ ನಮ್ಮ ಬಾಷೆ ಉಳಿವಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಮಾತನಾಡಿ ಕನ್ನಡ ನಾಡು ಗಂದದ ಬೀಡು ನಮ್ಮ ಬಾಷೆಗೆ ಎರಡು ಸಾವಿರ ವರ್ಷದ ಇತಿಹಾಸ ಇದೆ. ನಮ್ಮ ಅದೆ ಸಂಸ್ಕøತಿ ಇದೆ. ಯಾವ ರೀತಿಯಾಗಿ ನಮ್ಮ ತಂದೆ ತಾಯಿಯನ್ನ ಪ್ರೀತಿಸುತ್ತೇವೋ ಅದೇ ರೀತಿಯಾಗಿ ನಮ್ಮ ಬಾಷೆಯನ್ನು ಪ್ರೀತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲರೆಡ್ಡಿ ಮಾತನಾಡಿ ಕನ್ನಡ ಬಾಷೆಯು ಅತ್ಯಂತ ಪ್ರಾಚೀನ ಹಾಗು ಸುಸಂಕ್ಕøತವಾದ ಬಾಷೆಯಾಗಿದ್ದು, ಕನ್ನಡಬಾಷೆ ಉಳಿವಿಗಾಗಿ ಕನ್ನಡ ಬಾಷೆ ಶ್ರೀಮಂತವಾಗಲು ರತ್ನತ್ರಯರಾದ ರನ್ನ, ಜನ್ನ, ಪಂಪ ಮಹಾಕವಿಗಳು ಇನ್ನು ಅನೇಕ ಮಹನೀಯರು ಕಾರಣಕರ್ತರಾಗಿದ್ದು, ಇದಲ್ಲದೆ ಕನ್ನಡಬಾಷೆಯ ಲೇಖನಗಳಿಗಾಗಿ ಎಂಟು ಜ್ಞಾನಪೀಠಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ನಮ್ಮ ಬಾಷೆಯದಾಗಿದೆ. ಇಂತಹ ಮುತ್ತಿನಂತಹ ಬಾಷೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಹಾಗು ಕನ್ನಡ ಬಾಷೆ ಉಳಿವಿಗಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ನಮ್ಮ ಶಾಲೆಯಲ್ಲಿ ಕನ್ನಡ ಬಾಷೆಗೆ ಹೆಚ್ಚಿನ ಒತ್ತು ನೀಡಿ ಕಳುಹಿಸಲಾಗುತ್ತದೆ ಎಂದರು.
ಕಾರ್ಯದರ್ಶಿ ಡಾ|| ಕವಿತಾ , ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಎನ್.ಚಂದ್ರಶೇಖರ್, ಪ್ರಾಂಶುಪಾಲೆ ಅಸ್ಮಾತಬ್ಸಮ್ , ಉಪಪ್ರಾಂಶುಪಾಲೆ ದೀಪ, ಸಂಯೋಜಕ ರಮೇಶ್, ಸಿಬ್ಬಂದಿ ರಾಮು, ಸುಲ್ತಾನ್, ಇಸಿಒ ಕೆ.ಸಿ.ಶ್ರೀನಿವಾಸ್, ಸಿಆರ್ಪಿ ವೇಣುಗೋಪಾಲ್, ನಿವೃತ್ತ ಶಿಕ್ಷಕ ಶಿವಣ್ಣ ಹಾಗು ಶಿಕ್ಷಕ ಸಿಬ್ಬಂದಿ ಇದ್ದರು.