

ಬಸ್ರೂರು, ಆ.18: ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಸ್ರೂರು ಬಿ.ಎಂ. ಶಾಲೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು, ಇದೇ ಸಂದರ್ಭದಲ್ಲಿ ಹಾಲಿ ಮತ್ತು ನಿವೃತ್ತ ಸೈನಿಕರಿಗೆ ಸಮ್ಮಾನ ಹಾಗೂ ಅಶಕ್ತರಿಗೆ, ರೋಗಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯತು. ಜಿಲ್ಲಾ ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ, ರೇಷ್ಮೆ ಇಲಾಖೆಯ ಜಿ. ರಾಜೇಂದ್ರ ಶೆಟ್ಟಿಗಾರ್, ಉದ್ಯಮಿ ಹನೀಫ್ ಶೇಖ್ ಬಸ್ರೂರು, ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ಬಿ. ಸತ್ಯನಾರಯಣ, ಉಪಾಧ್ಯಕ್ಷ ಶಾವೆಲ್ ಹಮೀದ್, ಕಾರ್ಯದರ್ಶಿ ವಿವೇಕಾನಂದ ಉಪಸ್ಥಿತರಿದ್ದರು. ರಮೇಶ್ ಗಾಣಿಗ ಪ್ರಸ್ತಾವನೆಗೈದರು, ಫ್ಲೈವನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಬಿ.ಕೆ ವಂದಿಸಿದರು.

