ಬಸ್ರೂರು, ಜ.6: ಇಲ್ಲಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ 18 ನೇಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ, ಮಾಜಿ ಶಾಸಕ ಜಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಳೆದ 18 ವರ್ಷಗಳಿಂದ ಬಸ್ರೂರಿನ ಶ್ರೀ ಶಾರದಾ ಆಂಗ್ಲಮಾಧ್ಯಮ ಶಾಲೆ ಉತ್ತಮ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಭಾಟಿಸಿದ ಶಿಕ್ಷಣ ಸಂಯೋಜಕ, ರಾಜ್ಯ ಜೆಡಿಎಸ್ ವಕ್ತಾರ ಮಹೇಶ್ ಗೌಡ ಮಂಡ್ಯ ಮಾತನಾಡಿ, ಈ ಶಾಲೆ ಉತ್ತಮ ಶೈಕ್ಷಣಿಕ ಪರಂಪರೆ ಹೊಂದಿದೆ.ಇಲ್ಲಿ ಪಾಠವಷ್ಟೆ ಅಲ್ಲದೆ ಪಠ್ಯೇತರ ಚಟುವಟಕೆಗಳಿಗೂ ಒತ್ತು ಕೊಟ್ಟಿದ್ದಾರೆ’ ಎಂದರು.
ದುಬಾಯ್ ಫಾರ್ಜೂನ್ ಗ್ರೂಫ್ ಆಫ್ ಹೊಟೇಲ್ಸ್ ಚೆಯೆರ್ ಮೇನ್ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ. ಸಮಾಜ ಸೇವಕ ಇಬ್ರಾಹಿಂ ಮರವಂತೆ ಹಾಗೂ ಪತ್ರಕರ್ತ ರೂಪೇಶ್ ಪೂಜಾರಿ ಬೈಂದೂರು ಅವರಿಗೆ ಕೋಳ್ಕೆರೆ.ರತ್ನಾಕರ ಶೆಟ್ಟಿ ಸಾಧಕ ಪ್ರಶಸ್ತಿಯನ್ನು ನೀಡಲಾಯಿತು.
ಜಿಪಂ, ಮಾಜಿ. ಸದಸ್ಯ ಎಚ್. ದೇವಾನಂದ. ಶೆಟ್ಟಿ. ಶಾಲಾಡಳಿತ ಮಂಡಳಿಯ ಗಿಂಜ್. ಆರ್. ಶೆಟ್ಟಿ, ಅಬ್ದುಲ್ ಜುನೈಜ್, ಮೋನೆಸ್ ಮನೋಹರ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಹುಮಾನ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮವಾಗಿ ಭಾರತೀಯ ಸಂಪ್ರದಾಯ, ಭಾರತೀಯ ಸಂಸ್ಕೃತಿ, ವೀರ ಭಾರತೀಯ ಸೈನಿಕರು, ಯಕ್ಷಗಾನ, ಹುಲಿ ನೃತ್ಯ (ಹುಲಿ ವೇಷ), ಕೋಲಾಟ, ರೈತ ನೃತ್ಯ, ಸ್ವಚ್ಛ ಭಾರತ್ ಅಭಿಯಾನ, “ಜೈ ಜೋ” ಹಾಡಿನ ಮೇಲೆ ಪಿರಾಮಿಡ್, ಹದಿಹರೆಯದ ಮಕ್ಕಳ ಪ್ರಸ್ತುತ ಸನ್ನಿವೇಶದಲ್ಲಿ ಮೈಮಿಂಗ್, ಅತ್ಯುತ್ತಮ ಐಕಾನ್ ಚಲನಚಿತ್ರಗಳ ಹಾಡುಗಳ ಪ್ರದರ್ಶನ ನಡೆದವು. ಕಾರ್ಯಕ್ರಮ ವಂದೇ ಮಾತರಂ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಗಿ, ಕೆ.ಜಿ. ಮಕ್ಕಳು ಸ್ವಾಗತ ನ್ರತ್ಯ ಮಾಡಿದರು. ಪ್ರೌಢಶಾಲೆ ಮಕ್ಕಳು ಸ್ವಾಗತ ಗೀತೆ ಹಾಡಿದರು.
ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ವರದಿ ಮಂಡಿಸಿದರು, ಶಿಕ್ಷಕಿ ರೂಪ ಸ್ವಾಗತಿಸಿದರು. ಕಾರಕ್ರಮ ಫರಹಾ ನಿರೂಪಿಸಿದರು, ಸುಜಾತಾ ವಂದಿಸಿದರು.