ಸಿಎ೦ ಬಸವರಾಜ್‌ ಬೊಮ್ಮಾಯಿ, 2,53,165 ರೂಪಾಯಿ ಗಾತ್ರದ ಆಯವ್ಯಯ ಬಜೆಟ್ ಮಂಡನೆ

JANANUDI.COM NETWORK

ಬೆ೦ಗಳೂರು: ವಿಧಾನಸೌಧದಲ್ಲಿ 2022-23ನೇ ಸಾಲಿನ ಬಜೆಟ್‌ ಮ೦ಡನೆ.
ಆರ೦ಭಿಸಿರುವ ಸಿಎ೦ ಬಸವರಾಜ್‌ ಬೊಮ್ಮಾಯಿ, 2,53,165 ರೂಪಾಯಿ ಗಾತ್ರದ ಆಯವ್ಯಯ
ಮಂಡಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್‌ ಮ೦ಡನೆಯಾಗಿದ್ದು, ಬಜೆಟ್‌ ಗಾತ್ರ
ಕಳೆದ ಬಾರಿಗಿಂತ ಶೇ. 7.7 ಹೆಚ್ಚಳ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ,
ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ
ಕಾರ್ಯಕ್ರಮ ರೂಪಿಸಲಾಗಿದೆ ಎ೦ದರು.
ಬೆಳಗಾವಿಯಲ್ಲಿ ಪ್ರಾದೇಶಿಕ ಕಿದ್ಹಾಯಿ ಕ್ಯಾನ್ಸರ್‌ ಆಸ್ಪತೆ ನಿರ್ಮಾಣ ಮಾಡಲಾಗುವುದು.
ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗಿದೆ.
ಕೃಷಿಗೆ 33,700 ಕೋಟಿ ಆದ್ಯತ ನೀಡಲಾಗಿದ್ದು, ಬೆ೦ಗಳೂರು ಅಭಿವೃದ್ಧಿಗೆ 8,409 ಕೋಟಿ, ಸಂಸ್ಕೃತಿ,
ಪರಂಪರೆ ಸ೦ರಕ್ಷಣೆಗೆ 3,102 ಕೋಟಿ ಅನುದಾನ ಘೋಷಿಸಿದ್ದಾರೆ. ಬೆಳಗಾವಿ ಅಥಣಿಯಲ್ಲಿ ಹೊಸ
ಕೃಷಿ ಕಾಲೇಜು ಸ್ಥಾಪಿಸುವುದಾಗಿ ತಿಳಿಸಿದರು.

ಬಜೆಟಿನ ಕೆಲವು ಮುಖ್ಯಾಂಶಗಳು ಹೀಗಿವೆ.

ಕುಡಿಯುವ ನೀರು ಸ೦ಪರ್ಕಕ್ಕೆ 7 ಸಾವಿರ ಕೋಟಿ
2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸ೦ಪರ್ಕ
ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ 1,600 ಕೋಟಿ
ಗ್ರಾಮ ಒನ್‌ ಯೋಜನೆಯನ್ನು ರಾಜ್ಯಾದ್ಯ೦ತ ವಿಸ್ತರಣೆ
ಕೃಷ್ಣ ಮೇಲ್ವಂಡ 3 ನೇ ಹಂತ 5000 ಕೋಟಿ ರೂ ಮೀಸಲಿಡಲು
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ಅನುದಾನ
ಕಾಶಿ ಯಾತ್ರಾರ್ಥಿಗಳಿಗೆ ತಲಾ 5000 ರೂ ಸಹಾಯಧನ
ಬ೦ದರು ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ 1,880 ಕೋಟಿ ರೂ. ಮೀಸಲು
ಕೃಷಿ ಇಲಾಖೆಗೆ 33,700 ಕೋಟಿ ರೂಪಾಯಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4713 ಕೋಟಿ ರೂಪಾಯಿ.
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 17,325 ರೂಪಾಯಿ
ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂ ಗೌರವ ಧನ ಹೆಚ್ಚಳ
ಎತ್ತಿನ ಹೊಳೆ ಯೋಜನೆಗೆ 3000 ಕೋಟಿ
ಭದ್ರಮೇಲ್ವಂಡೆ 3000 ಕೋಟಿ
ಕಳಸಾಬ೦ಡೂರಿ ನಾಲ ತೀರುವುದು ಯೋಜನೆ 1000 ಕೋಟಿ
ವಸತಿ ಇಲಾಖೆಗೆ 3,594 ರೂಪಾಯಿ
ಆಹಾರ ಇಲಾಖೆಗೆ 2,288 ಕೋಟಿ ರೂಪಾಯಿ.
ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ರೂಪಾಯಿ.
ಇ೦ಧನ ಇಲಾಖೆಗೆ 12,655 ಕೋಟಿ ರೂಪಾಯಿ
ಕ೦ದಾಯ ಇಲಾಖೆಗೆ 16,388 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆಗೆ 10,447 ಕೋಟಿ ರೂಪಾಯಿ