ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರದ ನಗರೇಶ್ವರಸ್ವಾಮಿ ಅಖಿಲ ಭಾರತ ಶರಣ ಸಾಹಿತ್ಯ ಪರಿಶತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಮಂಗಳವಾರ ಬಸವ ಜಯಂತಿ ಆಚರಿಸಲಾಯಿತು.
ಶ್ರೀನಿವಾಸಪುರದ ನಗರೇಶ್ವರಸ್ವಾಮಿ ಅಖಿಲ ಭಾರತ ಶರಣ ಸಾಹಿತ್ಯ ಪರಿಶತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ
ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ
ಶ್ರೀನಿವಾಸಪುರ: ಬಸವೇಶ್ವರರರು ಸಾಮಾಜಿಕ ಕಳಕಳಿ ಸರ್ವಕಾಲಿಕ ಆದರ್ಶವಾಗಿದೆ. ಅವರ ವಚನಗಳಲ್ಲಿ ಸಾಮಾಜಿ ಮೌಲ್ಯಗಳ ಸುಗಂಧವಿದೆ ಎಂದು ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ, ಬಸವಣ್ಣ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬಸವಣ್ಣ ಅವರು ಪ್ರಾರಂಭಿಸಿದ ಅನುಭವ ಮಂಟಪ ವಚನಕಾರರಿಗೆ ಸ್ಫೂರ್ತಿಯ ಸೆಲೆಯಾಯಿತು. ಶಿವ ಶರಣರು ಹಾಗೂ ಶಿವ ಶರಣೆಯರು ಸಮಾಜ ಮುಖಿ ವಚನಗಳನ್ನು ರಚಿಸಿ, ವಚನ ಸಾಹಿತ್ಯ ಬೆಳೆಸಿದರು ಎಂದು ಹೇಳಿದರು.
ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶದಕ ಕೃಷ್ಣಪ್ಪ, ಕಂದಾಯ ನಿರೀಕ್ಷಕರಾದ ಬಲರಾಮೇಗೌಡ, ಗುರುಪ್ರಸಾದ್, ತಾಲ್ಲೂಕು ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ಕಪಾಲಿ ಮೋಹನ್, ಮಂಜುನಾಥ್, ಗರೀಶ್, ಶಿವಕುಮಾರ್, ನರೇಂದ್ರ ಇದ್ದರು.