ಬ್ರಹ್ಮಾವರ; ಬಾರ್ಕೂರಿನ ಹನೆಹಳ್ಳಿ ಸಮೀಪ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ತರುಣ ಮೃತಪಟ್ಟ ಘಟನೆ ನಡೆದಿದೆ. ಚಾಂತಾರಿನ ಹರಿಪ್ರಸಾದ್(29)ಮೃತ ದುರ್ದೈವಿ
ಫ್ಲಿಪ್ ಕಾರ್ಟ್ ಆನ್ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದ ಹರಿಪ್ರಸಾದ್, ಹನೆಹಳ್ಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಗ್ರಾಹಕರಿಗೆ ಕರೆ ಮಾಡಿ ಡೆಲಿವರಿ ವಿಳಾಸ ಕೇಳುತ್ತಿದ್ದಾಗ ಅತಿವೇಗದಲ್ಲಿ ಬಂದ ಆಲ್ಟೋ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಯುವಕ ಕಾರಿನ ಚಕ್ರದಡಿಯಲ್ಲಿ ಸಿಲುಕಿ ಸುಮಾರು ದೂರ ಕಾರು ಎಳೆದುಕೊಂಡು ಹೋಗಿದ್ದು, ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಕುರಿತು ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.