ಬಾರಕೂರು : “ಇಂದು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲತೆಗಳು ಹೇರಳವಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು ” ಎಂದು ಬಾರಕೂರು ನೇಷನಲ್ ಪ ಪೂ ಕಾಲೇಜು ಹಳೇ ವಿದ್ಯಾರ್ಥಿಸಂಘ (ರಿ ) ದ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ ಹೇಳಿದರು. ಅವರು ನೇಷನಲ್ ಪ. ಪೂ. ಕಾಲೇಜು ಹಳೇ ವಿದ್ಯಾರ್ಥಿ ಸಂಘ ಮತ್ತು ನೇಷನಲ್ ಪ. ಪೂ. ವಿದ್ಯಾಸಂಸ್ಥೆ ಜಂಟಿಯಾಗಿ ಗುರುವಾರ ಬಾರಕೂರನಲ್ಲಿ ಆಯೋಜಿಸಿದ್ದ ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪ್ರತಿಭಾವಂತ ವಿದ್ಯಾರ್ಥಿಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ನೇಷನಲ್ ವಿದ್ಯಾಸಂಸ್ಥೆ ಇವತ್ತು ಗತ ವೈಭವ ಪಡೆಯುತ್ತಿದೆ. ಶಿಸ್ತು, ಗುಣಮಟ್ಟದ ಶಿಕ್ಷಣ ಶೇಕಡಾ 100 ಫಲಿತಾಂಶದೊಂದಿಗೆ ಹೆಮ್ಮೆ ಮೂಡಿಸುತ್ತಿದೆ. ಆದ್ದರಿಂದ ಉಚಿತ ಸಮವಸ್ತ್ರ ನೀಡುವುದು ಸಾರ್ಥಕ ಎಂಬ ಭಾವನೆ ನಮಗೆ ಬಂದಿದೆ ಸಂಸ್ಥೆಯನ್ನು ಮುಕ್ತವಾಗಿ ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಸಂಕಾಡಿ ವಹಿಸಿದ್ದರು.
ದಿ ಬಾರಕೂರು ಎಜುಕೇಷನ್ ಸೊಸೈಟಿ ( ರಿ) ಅಧ್ಯಕ್ಷ ಬಿ ಶಾಂತಾರಾಮ ಶೆಟ್ಟಿ ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ದಿ ಬಾರಕೂರು ಎಜುಕೇಷನ್ ಸೊಸೈಟಿ (ರಿ ) ಕಾರ್ಯದರ್ಶಿ ಅಶೋಕಕುಮಾರ್ ಶೆಟ್ಟಿ, ಉಪಾಧ್ಯಕ್ಷ ಶೇಡಿಕೋಡ್ಲು ವಿಠಲ ಶೆಟ್ಟಿ, ಕೋಶಾಧಿಕಾರಿ ಕೃಷ್ಣ ಹೆಬ್ಬಾರ್, ಸಂಚಾಲಕ ಬಿ ಗೋಪಾಲ ನಾಯ್ಕ, ಆಡಳಿತ ಸಂಯೋಜಕರಾದ ಆರ್ಚಿ ಬಾಲ್ಡ್ ಪುರ್ಟಾಡೋ, ಹೇರಾಡಿ ಎಸ್ ವಿ ವಿ ಎನ್ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಎಸ್ ಜಯರಾಮ್ ಶೆಟ್ಟಿ, ಹಳೇ ವಿದ್ಯಾರ್ಥಿಸಂಘದ ಉಪಾಧ್ಯಕ್ಷ ಎಸ್ ಜಯರಾಮ್ ಹೆಗ್ಡೆ, ಹರೀಂದ್ರ ನಾಥ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಶೇಕಡಾ 100% ಫಲಿತಾಂಶ ತಂದ ಎಲ್ಲ ಉಪನ್ಯಾಸಕ ಮತ್ತು ಶಿಕ್ಷಕರನ್ನು ಗೌರವಿಸಲಾಯಿತು. ನೇಷನಲ್ ಪ. ಪೂ. ಕಾಲೇಜನ ಪ್ರಾಂಶುಪಾಲ ಯು ಕೊಟ್ರಸ್ವಾಮಿ ಸ್ವಾಗತಿಸಿದರು. ನೇಷನಲ್ ಪ್ರೌಢಶಾಲವಿಭಾಗದ ಮುಖ್ಯಸ್ಥೆ ಹೇಮಾವತಿ ವಂದಿಸಿದರು. ಕನ್ನಡ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.