

ಕುಂದಾಪುರ: ಬೇಂಕ್ ಆಫ್ ಬರೋಡ ಕುಂದಾಪುರ ಮತ್ತು ಕೋಟೇಶ್ವರ ಶಾಖೆಯ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಖ್ಯೆಯ ಕುಂದಾಪುರ ಘಟಕ ಕ್ಕೆ ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಸೆಂಟ್ರಿಫ್ಯೂಜನ್ನು ದೇಣಿಗೆ ನೀಡಿದರು. ಕುಂದಾಪುರದ ಮುಖ್ಯ ಪ್ರಭಂದರಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಕೋಟೇಶ್ವರ ಶಾಖೆಯ ಹಿರಿಯ ಪ್ರಭಂದಕರಾದ ಶಂಕರ್ ಶೆಟ್ಟಿ ಇದನ್ನು ಹಸ್ತಾಂತರಿಸಿದರು.
ರೆಡ್ ಕ್ರಾಸ್ ಸಂಸ್ಥೆ ಯ ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ನಾರಾಯಣ ದೇವಾಡಿಗ ಇದನ್ನು ಸ್ವೀಕರಿಸಿದರು.
