ಬೆಂಗಳೂರು: ‘ಸಂಸ್ಕಾರ, ಸಂಸ್ಕೃತಿ ಪಸರಿಸುವ ವಿಶಿಷ್ಟ ಕಲೆ ಯಕ್ಷಗಾನ, ‘ಇದು ಹೇಗೆ ಸರಿ, ಅದೇಕೆ ಸರಿಯಲ್ಲ’ ಮುಂತಾಗಿ ತರ್ಕಿಸುವ ಬುದ್ಧಿ ನಮಗೆ ಶಾಲಾ ಪಠ್ಯದಿಂದ ದೊರೆತಿದ್ದಲ್ಲ, ಬದಲಾಗಿ ತರ್ಕಶಕ್ತಿ, ಪದ ಭಂಡಾರ. ಪೌರಾಣಿಕ ಜ್ಞಾನ ಇವೆಲ್ಲ ದೊರೆತಿರುವುದು ಯಕ್ಷಗಾನದಿಂದ’ ಎಂದು ಹಿರಿಯ ಅರ್ಥವಾದಿ ಜಬ್ಬಾರ್ ಸಮೋ ಅವರು ತಾಳಮದ್ದಲೆಗೆ ಮುನ್ನ, ಯಕ್ಷ ಸಂಕ್ರಾಂತಿ ವತಿಯಿಂದ ‘ಗುರು ಸಮ್ಮಾನ ಸ್ವೀಕರಿಸಿ ಅವರು ಮಾತಾನಾಡಿದರು.
ನಗರದ ರವೀಂದ್ರ ಕಲಾಕ್ಷೇತ್ರ ನಗರದಲ್ಲಿ ನಡೆದ ಪೂರ್ಣರಾತ್ರಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುಗಾರ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಸೇತುರಾಂ ಎಸ್ಎನ್, ಜಬ್ಬಾರ್ ಸಮೋ, ಟಿ. ಶಿವಾನಂದ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಡಾ.ಬಾಬು ಗೋವಿಂದ ಪೂಜಾರಿ, ರಘುರಾಮ ಶೆಟ್ಟಿ ಎಳ್ಮುಡಿ, ಪ್ರವೀಣ್ ಕುಮಾರ್ ಶೆಟ್ಟಿ, ಅಶ್ವಥ್ ಹೆಗ್ಡೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ‘ಕೃಷ್ಣ ಸಂಧಾನ’ ಹಾಗೂ ಕರ್ಣಾರ್ಜು ಎಂಬ ಅಖ್ಯಾನಗಳ ಯಕ್ಷಗಾನ ತಾಳಮದ್ದಳೆ ಜರುಗಿತು. ಸುಮಾರು ಒಂದು ಸಾವಿರಕ್ಕು ಹೆಚ್ಚು ಪ್ರೇಕ್ಷಕರು ಆಗಮಿಸಿದ್ದರು, ಇನ್ನೂರಕ್ಕೂ ಹೆಚ್ಚು ಪ್ರೇಕ್ಷಕರು ಬೆಳಗಿನ ಜಾವದ ತನಕ ಉಪಸ್ಥಿತರಿದ್ದರು.
ಸಂಘಟಕ ನಾಗರಾಜ್ ಶೆಟ್ಟಿ ನೈಕಂಬ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ನಂದ್ರೊಳ್ಳಿ ವಂದಿಸಿ, ಸುನಿಲ್ ಹೊಲಾಡು ನಿರೂಪಿಸಿದರು.