

ಕುಂದಾಪುರ: ಬೆಂಗಳೂರು ಮೈಸೂರು ರೈಲು ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ರೈಲನ್ನು ಈಗ ಮುರುಡೇಶ್ವರದ ವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 16ರಿಂದ ಮುರುಡೇಶ್ವರದ ವರೆಗೆ ರೈಲು ಸಂಚಾರ ಆರಂಭಗೊಳ್ಳಲಿದೆ.
ಬೆಂಗಳೂರಿನಿಂದ ಸೆಪ್ಟೆಂಬರ್ 16ರ ರಾತ್ರಿ ಹೊರಡಲಿದ್ದು ಮೈಸೂರು, ಸಪ್ಟಂಬರ್ 17ರಂದು ಬೆಳಿಗ್ಗೆ ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರ ತಲುಪಲಿದೆ.ಈ ಹಿಂದೆ ಈ ರೈಲು ಮಂಗಳೂರು ವರೆಗೆ ಮಾತ್ರ ಸಂಚರಿಸುತ್ತಿದ್ದು, ಈಗ ಸಂಚಾರವನ್ನು ವಿಸ್ತರಿಸಲಾಗಿದೆ ಇದರಿಂದ ಕುಂದಾಪುರ ಭಾಗದವರಿಗೆ ಹೆಚ್ಚು ಅನುಕೂಲವಾಗಲಿದೆಯೆಂದು ಅಭಿಪ್ರಾಯ ಪಡಲಾಗಿದೆ
ಈ ವಿಸ್ತರಣೆಗಾಗಿ ಕರಾವಳಿ ಅದರಲ್ಲೂ ಕುಂದಾಪುರ ಭಾಗದ ರೈಲು ಪ್ರಯಾಣಿಕರ ಒತ್ತಾಯ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಈ ರೈಲು ಸಂಚಾರವನ್ನು ಮುರುಡೇಶ್ವರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮೈಸೂರು ಭಾಗದಿಂದ ಕರಾವಳಿಗೆ ಬರುವವರಿಗೆ ಕರಾವಳಿ ಭಾಗದಿಂದ ಮೈಸೂರು ಕಡೆಗೆ ತೆರಳುವವರಿಗೆ, ಅನುಕೂಲವಾಗಲಿದೆ.