ನವದೆಹಲಿ: ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ವಾಸದ ಮನೆಗಳಿಗೆ ಭಾರಿ ಬೇಡಿಕೆ ಇದ್ದು. ಈ ಕ್ಯಾಲೆಂಡರ್ ವರ್ಷದ ಎರಡನೇ ತ್ರೈಮಾಸಿದ ಏಪ್ರಿಲ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ (ಪ್ರಪಂಚದ) ಸೂಚ್ಯಂಕದಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22 ನೇ ಸ್ಥಾನಕ್ಕೆ ನೆಗೆದಿವೆ
ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸುವ ಗ್ಲೋಬಲ್ ರೆಸಿಡೆನ್ಷಿಯಲ್ ಸಿಟೀಸ್ ಇಂಡೆಕ್ಸ್ ನ ಕಳೆದ ಬಾರಿಯ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿತ್ತು ಇದೀಗ ಬೆಂಗಳೂರು 22ನೇ ಸ್ಥಾನಕ್ಕೆ ಏರಿದೆ. ಮುಂಬೈ 95ನೇ ಸ್ಥಾನದಿಂದ 19ನೇ ಸ್ಥಾನಕ್ಕೆಜಿಗಿತ ಕಂಡಿದೆ. ಕೆಲವೇ ಕೆಲವು ವರ್ಷಗಳಲ್ಲಿ ಮುಂಬಯ್ ಕಿಂತಲೂ ಬೆಂಗಳೂರು ಹೆಚ್ಚು ಜಿಗಿತವಾಗುವ ಸಾಧ್ಯತೆಗಳು ಕಂಡು ಬರುತ್ತವೆ.
ಬೆಂಗಳೂರಿನಲ್ಲಿ ಕಳೆದ ಪರ್ಷದ ಏಪ್ರಿಲ್ ನಿಂದ ಜೂನ್ ವರೆಗಿನ್ ಕ್ವಾರ್ಟರ್ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಪಸತಿ ಬೆಲೆಗಳಲ್ಲಿ ಶೇ. 5.3ರಷ್ಟು ಏರಿಕೆ ಆಗಿದೆ. ಇನ್ನೂ ನವದೆಹಲಿಯಲ್ಲಿ ನಿವೇಶನಕ್ಕೆ ಶೇ. 4.5 ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದೆ. ಚೆನ್ನೈನಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು, ಜಾಗತಿಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದೆ. ಕೋಲ್ಕತಾದಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದೆ.