

ಕುಂದಾಪುರ, ಅ.22: ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಬೆಂಗಳೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರುಗಳು ಮತ್ತು ನಿರ್ವಹಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರು ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದು ಇದರ ನಿಮಿತ್ತ ಕುಂದಾಪುರ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ. ಗೆ (ಅ.19 ರಂದು) ಭೇಟಿ ನೀಡಿ ಸಂಘ ನಡೆದು ಬಂದ ದಾರಿ ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆ ಗಳು, ಸಾಲ ವಿತರಣೆ, ಠೇವಣಿಗಳ ಸಂಗ್ರಹಣೆ, ವಸುಲಾತಿ ಮತ್ತು ಸಂಘದ ಮೇಲ್ವಿಚಾರಣೆ ಕುರಿತು ಚರ್ಚಿಸಲಾಯಿತು, ಸಂಘದ ಗ್ರಾಹಕರಿಗೆ, ಸದಸ್ಯರಿಗೆ ಸಾರ್ವಜನಿಕ ಉಪಕಾರ ನಿಧಿ, ಧರ್ಮದ ನಿಧಿ ಜೋಡಣೆ ಮತ್ತು ಅನುಷ್ಠಾನದ ಕುರಿತು ಚರ್ಚಿಸಲಾಯಿತು.

ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಉತ್ತಮ ಯೋಜನೆಗಳ ಬಗ್ಗೆ ತಿಳಿದುಕೊಂಡು, ಅವರ ಯೋಜನೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿ, ಸೊಸೈಟಿಯ ಏಳಿಗೆ ಬಗ್ಗೆ ಶ್ಲಾಘಿಸಿ ಸಂಘದ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಅಲ್ಮೆಡಾ ಇವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಪರವಾಗಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ನಿರ್ದೇಶಕರಾಗಿರುವಂತಹ ಗೌರವಾನ್ವಿತ ಶ್ರೀ ಎ ಸಿ.ನಾಗರಾಜುರವರು ಸನ್ಮಾನಿಸಿ ಶುಭವನ್ನ ಕೋರಿದರು.
ಸನ್ಮಾನ ಸ್ವೀಕರಿಸಿದ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಅಲ್ಮೆಡಾ ನಮ್ಮ ಸೊಸೈಟಿ ಕೇವಲ ಹಣದ ವ್ಯವಹಾರ ಮಾಡದೆ, ಸಾಮಾಜಿಕ ಹಿತದ್ರಷ್ಟಿಯಿಂದ ಬಡವರಿಗೆ, ರೋಗಿಗಳಿಗೆ, ಸಂಘ ಸಂಸ್ಥೆಗಳಿಗೆ ಸಹಾಯಧನವನ್ನು ನೀಡುತ್ತದೆ, ಸದಸ್ಯರ ಮಕ್ಕಳಿಗೆ ವಿಧ್ಯಾಭಾಸಕ್ಕಾಗಿ ವಿಶೇಷವಾದ ಸಾಲದ ಯೋಜನೆಗಳನ್ನು ಹಮ್ಮಿಕೊಂಡ್ಡಿದ್ದೆವೆ. 1 ಮುಖ್ಯ ಕಚೇರಿ ಮತ್ತು 8 ಬ್ರಾಂಚಗಳನ್ನು ಹೊಂದಿಕೊಂಡು, ಅದರಲ್ಲಿ ಹೆಚ್ಚಿನವು ನಾವು ನಮ್ಮ ಸ್ವಂತ ಕಟ್ಟಡಗಳಲ್ಲಿ ವ್ಯವಹಾರ ಮಾಡುತ್ತಿದೆವೆ” ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೇಬಲ್ ಡಿ ಅಲ್ಮೆಡಾ ರೋಜರಿ ಸೊಸೈಟಿಯ ಲೇವಾ ದೆವಿಯ ಬಗ್ಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ರೋಜರಿ ಸೊಸೈಟಿಯ ಉಪಾಧ್ಯಕ್ಷಾರಾದ ಶ್ರೀ ಕಿರಣ್ ಲೋಬೊ, ಒಝ್ಲಿನ್ ರೆಬೆಲ್ಲೊ, ಶಾಂತಿ ಆರ್. ಕರ್ವಾಲ್ಲೊ ಮತ್ತಿತರು ನಿರ್ದೇಶಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ನಿರ್ದೇಶಕರಾಗಿರುವಂತಹ ಗೌರವಾನ್ವಿತ ಶ್ರೀ ಎ ಸಿ.ನಾಗರಾಜುರವರು ಮತ್ತು ಉಪಾಧ್ಯಕ್ಷರಾದ ಶ್ರೀ. ಬಿ ಟಿ ಶ್ರೀನಿವಾಸ್ ಮೂರ್ತಿ ಅವರು ಹಾಗೂ ನಿರ್ದೇಶಕರುಗಳಾದ ಶ್ರೀ ಎನ್. ಹೆಚ್. ಜಯದೇವಯ್ಯ, ಕೆ.ಮುನಿರಾಜು, ಎಸ್.ರಮೇಶ್, ಲಕ್ಷ್ಮೀಗೌಡ, ಮಂಡಿಬೆಲೆ ರಾಜಣ್ಣ, ಶ್ರೀಮತಿ ಆರ್. ರುಕ್ಮಿಣಿ ಭಾಯಿ, ಮಾಜಿ ನಿರ್ದೇಶಕರಾದ ಜಿ. ಸಂಪಂಗಿ ಗೌಡ ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಮಾಜಿ ಅಧ್ಯಕ್ಷರು ಶ್ರೀಮತಿ ಫಾತಿಮಾ ಲಾರೆನ್ಸ್ , ಶ್ರೀ ಪುರುಷೋತ್ತಮ್ ಎಸ್ ಪಿ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸುವರ್ಣ ಪಂಕಜಾಕ್ಷಿ, ಆರ್. ನಾಗರಾಜು, ದಿನೇಶ್, ಕೆ. ಮಂಜುನಾಥ್ ಸಿಬ್ಬಂದಿಗಳು ಹಾಜರಿದ್ದರು. ರೋಜರಿ ಸಒಸೈಟಿಯ ನಿರ್ದೇಶಕಿ ಡಯಾನಾ ಆಲ್ಮೇಡಾ ವಂದಿಸಿದರು.




















