ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸೆಂಟ್ ಜೋಸೆಫ್ ಸಿಬಿಎಸ್ಇ ಶಾಲೆಯಲ್ಲಿ ಭವಿಷ್ಯದ ನವೀಕರಣ ಎಂಬ ಘೋಷವಾಕ್ಯದಡಿಯಲ್ಲಿ ದಿನಾಂಕ. 24.08.2024 ರಂದು ವಿಜ್ಞಾನ ಮತ್ತು. ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನೋಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ಕುಶಾಗ್ರಮತಿ ಅನಲಾಟಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಅದ ಡಾ. ಅನಂತ್ ಆರ್. ಕೊಪ್ಪರ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಮುಖ್ಯ ಅತಿಥಿಗಳು ಹವಾಮಾನ ವೈಪರಿತ್ಯ ಮತ್ತು ಭವಿಷ್ಯದ ನವೀಕರಣದಲ್ಲಿ ಜನಾಂಗದ ಪಾತ್ರ ಯಾವ ರೀತಿಯದ್ದು, ಅಭಿವೃದ್ಧಿಯ ಹೆಸರಿನಲ್ಲಿ ದುರಂತಗಳು ಯಾವ ರೀತಿ. ಸಂಭವಿಸುತ್ತಿದೆ. ನಮ್ಮ ಸಂಶೋಧನೆಗಳು ಭವಿಷ್ಯವನ್ನು ಒಳಗೊಂಡ ಯಾವುದೇ ರೀತಿಯ ತೊಂದರೆಗಳಿಗೆ ಒಳಗಾಗದಂತೆ ನಡೆಯಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಗೆ ಹೃದಯ ಮತ್ತು ಭಾವನೆಗಳು. ಇರುವುದಿಲ್ಲ, ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗ್ರಹಿಸಬೇಕು. ಎಂಬುದನ್ನು ತಿಳಿಸಿಕೊಟ್ಟರು. ನಂತರ. ಕಾರ್ಯಕ್ರಮದ. ಕುರಿತಾಗಿ ಮಾತನಾಡಿದ. ಶಾಲೆಯಪ್ರಾಂಶುಪಾಲರಾದ ಫಾದರ್ ರೋಹನ್ ಡಿ. ಅಲೈಡ ರವರು ಭವಿಷ್ಯದ ಸಮಾಜಕ್ಕಾಗಿ ವಿದ್ಯಾರ್ಥಿಗಳ ಮನಸ್ಥಿತಿ ರೂಪಕೊಳ್ಳಬಹುದಾದ ಬಗೆಯ ಬಗ್ಗೆ ತಿಳಿಸಿಕೊಟ್ಟರು. ಯಾವುದೇ ಕಂಪನಿ ಅಥವಾ ಸಂಸ್ಥೆಗಳಾಗಿರಲಿ ತನ್ನದೇ ತತ್ವಗಳನ್ನು ಒಳಗೊಂಡು ಯಶಸ್ಸನ್ನು ಸಾಧಿಸಿರುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ತತ್ವ ಮತ್ತು ಆದರ್ಶಗಳನ್ನು. ಪಾಲಿಸಿದ್ದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟರು ಕಾರ್ಯಕ್ರಮದಲ್ಲಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ಪೋಷಕರನ್ನು ಸಹ ಸತ್ಕರಿಸಿ ಸನ್ಮಾನಿಸಲಾಯಿತು. ನಂತರ. ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಮಾದರಿಗಳ ಕುರಿತು. ವಿದ್ಯಾರ್ಥಿಗಳು ಮಾಧ್ಯಮದ ಜೊತೆ ಮತ್ತು ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ ಜೋಸಫ್ ಮತ್ತು ಸಂಸ್ಥೆಯ ಆರ್ಥಿಕ ಅಧಿಕಾರಿಗಳಾದ ಫಾದರ್ ರಾಯ್ ಸ್ಟನ್ ಪಿಂಟೋ ಹಾಗೂ ಶಾಲೆಯ ಪೋಷಕ ಸಭೆಯ ಅಧ್ಯಕ್ಷರಾದ ಶ್ರೀ ಕಮಲ್, ಸಂಯೋಜಕ ವರ್ಗದವರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.