ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಕೋಲಾರದಿಂದ ದತ್ತ ಮಾಲೆಗೆ ತೆರಳುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣವನ್ನು ಕೋಮು ಬಣ್ಣ ನೀಡಲು ಅನವಶ್ಯಕವಾಗಿ ಬಂದ್ಗೆ ಕರೆ ನೀಡಿ , ಸರ್ಕಾರ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗುವುದರಿಂದ ನಷ್ಟ ಭರ್ತಿಗೆ ಕ್ಲಮ್ ಕಮಿಷನರ್ ನೇಮಕ ಮಾಡಲು ಕೋರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಾಮಾಜಿಕ ಕಾರ್ಯಕರ್ತ ಕೂಟೇರಿ ಮುನೆಯ್ಯ ಮನವಿ ಸಲ್ಲಿಸಿದ್ದಾರೆ . ದಿನಂಕ 7/11/2021 ರಂದು ದತ್ತ ಮಾಲೆಧಾರಿಗಳು , ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಪ್ರಚೋದನಕಾರಿ ಘೋಷಣೆಗಳು ಕೂಗಿ , ಉದ್ದೇಕ್ಕಾಗಿ ಸನ್ನಿವೇಶ ಸೃಷ್ಟಿಸಿದ್ದರಿಂದ ಕೆಲ ಕಿಡಿಕೇಡಿಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಾರೆ . ತಕ್ಷಣವೇ , ಪೋಲೀಸರ ಸಕಾಲಿಕ ಪ್ರವೇಶದಿಂದ ಅನಾಹುತ ತಪ್ಪಿದ್ದು , ಈಗಾಗಲೇ ಹಲವರ ಬಂಧನವೂ ಆಗಿದೆ . ಹೀಗಿರುವಾಗ , ದಿ : 18/11/2021 ರಂದು ಬಂದ್ಗೆ ಕರೆ ನೀಡಿ , ಪಕ್ಷುಬ್ಧ ಸ್ಥಿತಿ ನಿರ್ಮಾಣ ಮಾಡಲು ಹೊರಟಿ ದ್ದಾರೆ . ನಾಳೆ ಬ೦ದ್ ಪ್ರಯುಕ್ತ ಸರ್ಕಾರ , ಸಾರ್ವಜನಿಕರಿಗೆ ಕೋಟ್ಯಾಂತರ ರೂ.ಹಣ ನಷ್ಟವಾಗುವದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಷ್ಟ ಭರ್ತಿಗೆ ಕೈಮ್ ಕಮೀಶನರ್ ನೇಮಕ ಮಾಡಿ ಬಂದ್ ಆಯೋಜಕರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ .