ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕು – ರೈತ ಸಂಘದಿಂದ ಒತ್ತಾಯ

ಮುಳಬಾಗಿಲು : ಪೆ.28: ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕೆಂದು ರೈತ ಸಂಘದಿಂದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮುಖಾಂತರ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಹಗಲು ರಾತ್ರಿ ಎನ್ನದೆ ಬಿಸಿಲು ಗಾಳಿಗೆ ಬೆವರು ಸುರಿಸಿ ಬಂಡವಾಳ ಹಾಕಿ ಬೆಳೆದಿರುವ ರಾಗಿಗೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರಿಗೆ ಸೇರಬೇಕಾದ ಬೆವರಿಗೆ ತಕ್ಕ ಪ್ರತಿಪಲ ದಲ್ಲಾಳಿಗಳಿಗೆ ಸೇರುತ್ತಿರುವುದು ದುರಾದೃಷ್ಟಕರ ಎಂದು ಅವ್ಯವಸ್ಥೆಯ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿ 3578 ರೂ ಘೋಷಣೆ ಮಾಡಿರುವ ಬೆಂಬಲ ಬೆಲೆ 90 ದಿನ ಕಷ್ಟಪಟ್ಟಿರುವ ರೈತರ ಹೆಸರಿನಲ್ಲಿ ದಲ್ಲಾಳಿಗಳು ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ರೈತ ವಿರೋದಿ ದೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ರೈತರು ರಾಗಿ ತರಬೇಕಾದರೆ ಚೀಲದಿಂದ ಎಲ್ಲಾವೂ ರೈತರೇ ವ್ಯವಸ್ಥೆ ಮಾಡಿಕೊಳ್ಳಬೇಕು ಆದರೆ ದಲ್ಲಾಳರು ತರುವ ರಾಗಿಗೆ ಯಾವುದೇ ಚೀಲ ಬೇಡ ಅಧಿಕಾರಿಗಳೇ ನೇರವಾಗಿ 100 ಕ್ವಿಂಟಾಲ್ ಒಂದೇ ದಿನದಲ್ಲಿ ಖರೀದಿ ಮಾಡಿಕೊಂಡು ಬೆಂಬಲ ಬೆಲೆಯ ಹಣವನ್ನು ದಲ್ಲಾಳರು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆಂದ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು .
ಕೆಲವು ರಾಗಿ ಖರೀದಿ ದಲ್ಲಾಳರು ದೊಡ್ಡ ರೈತರಿಂದ ರಾಗಿಯನ್ನು ಕಡಿಮೆ ಬೆಲೆಗೆ  ಖರೀದಿ ಮಾಡಿ ಸಣ್ಣರೈತರ ಹೆಸರಿನಲ್ಲಿ ನಕಲಿ ದಾಖೆಲಗಳನ್ನು ಸೃಷ್ಠಿ ಮಾಡಿ ಸರ್ಕಾರದ ಬೆಂಬಲ ಬೆಲೆ ಯನ್ನು ರೈತರ ಹೆಸರಿನಲ್ಲಿ ಲೂಟಿ ಮಾಡಲು ವ್ಯಾಪಾರಸ್ಥರಿಗೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪ ಮಾಡಿದರು.

ವಂಚನೆ ಹೇಗೆಂದರೆ:


ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದರೆ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಎಪ್.ಐ.ಡಿ ಮಾಡಿಸುವುದು ಕಡ್ಡಾಯ ಎಪ್.ಐ.ಡಿ ಸೃಷ್ಠಿಗೆ ಜಮೀನಿನ ಪಹಣಿ ಆದಾರ್ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಅಗತ್ಯವಾಗಿದೆ ಈ ಎಲ್ಲಾ ದಾಖೆಲಗಳನ್ನೇ ಬಳಸಿಕೊಂಡು ಸೈಬರ್ ಸೆಂಟರ್ ಸಾಮಾನ್ಯ ಸೇವಾ ಸಿಬ್ಬಂದಿ ಅಮಾಯಕ ರೈತರ ಹೆಸರಿನಲ್ಲಿ ಎಪ್.ಐ.ಡಿ ಸೃಷ್ಠಿಸುತ್ತಿದ್ದಾರೆ . ಬಳಿಕ ಎಪ್.ಐ.ಡಿ ಗೆ ರೈತರ ಬದಲು ವ್ಯಾಪಾರಿಗಳ ಬ್ಯಾಂಕ್ ಖಾತೆ ನಂಬರ್ ನಮೂದಿಸಿ ರಾಗಿ ಮಾರಿದ ಹಣ ಅವರ ಖಾತೆಗೆ ಹೋಗುವಂತೆ ನೋಡಿಕೊಳ್ಳುತ್ತಾರೆ. ಈಗಾಗಿ ಸಣ್ಣ ರೈತರು ತಾವು ಬೆಳೆದ ರಾಗಿ ಬೆಂಬಲ ಬೆಲೆ ಮಾರಾಟಕ್ಕೆ ಹೋಗುವ ವೇಳೆಗೆ ಅವರ ಹೆಸರಿನಲ್ಲಿ ಖರೀದಿ ದಾಖೆಲೆಗಳು ಸೃಷ್ಠಿಯಾಗಿ ವಂಚನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ ಮಾತನಾಡಿ ಆಕ್ರಮ ರಾಗಿ ಖರೀದಿಗೆ ಅಧಿಕಾರಿಗಳೇ ಸಾಥ್; ಎಪ್.ಐ.ಡಿ ಸೃಷ್ಠಿಯವೇಳೆ ಸಣ್ಣ ವ್ಯತ್ಯಾಸವಿದ್ದರೂ ಅಧಿಕಾರಿಗಳ ಲಾಗಿನ್‍ಗೆ ಬಂದಾಗ ಒಪ್ಪುವುದಿಲ್ಲ ಆದರೆ ಸೈಬರ್ ಸೆಂಟರ್ ಸಾಮಾನ್ಯ ಸೇವಾ ಕೇಂದ್ರ ಸೃಷ್ಠಿಸಿದ ಎಪ್.ಐ.ಡಿಗಳಿಗೆ ಕೃಷಿ ತೋಟಗಾರಿಕೆ ಕಂದಾಯ ಮತ್ತಿತರ ಇಲಾಖೆಗಳ ಕೆಳಹಂತದ ಅಧಿಕಾರಿಗಳ ನೆರವಿಲ್ಲದೆ ಯಾರದೋ ಹೆಸರಿನ ಪಹಣಿಗೆ ಇನ್ನಾರದೋ ದಾಖಲೆ ನೊಂದಾಯಿಸಲು ಹೇಗೆ ಅವಕಾಶ ನೀಡಲಾಗುತ್ತದೆ ರೈತರ ದುಡಿಮೆ ಹಣವೇ ಅಧಿಕಾರಿಗಳಿಗೆ ಬೇಕಾ ಎಂದು ಕಿಡಿ ಕಾರಿದರು.

ಟೋಕನ್ ಪಡೆಯದಿದ್ದರೆ ರೈತರ ರಾಗಿ ಖರೀದಿ ಇಲ್ಲ ಸರ್ಕಾರದ ಬೆಂಬಲ ಬೆಲೆ ಪಡೆಯಬೇಕಾದರೆ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೂ ಮುಂಚೆ ರೈತರಿಗೆ 3-4 ವಾರದ ಮೊದಲೇ ಟೋಕನ್ ಕೊಡಲಾಗುತ್ತದೆ. ಟೋಕನ್ ನೀಡುವ ಪ್ರಕ್ರಿಯೆ ನಿಲ್ಲಿಸಿದ ಕೆಲ ಹಿರಿತನದ ಆಧಾರದಲ್ಲಿ ರಾಗಿ ಸರಬರಾಜು ಮಾಡಬೇಕಾಗುತ್ತದೆ. ಆದರೆ ರೈತರು ತರುವ ರಾಗಿಗೆ ಇಷ್ಟೇ ಖರೀದಿ ಎಂದು ನಿಯಮ ನಿಗದಿ ಮಾಡುವ ಅಧಿಕಾರಿಗಳು ರೈತರ ಹೆಸರಿನಲ್ಲಿ ರಾಗಿ ದಲ್ಲಾಳರು ಮಿತಿಯಿಲ್ಲದ ನೂರಾರು ಕ್ವಿಂಟಾಂಲ್ ರಾಗಿಯನ್ನು ಯಾವ ಆಧಾರದ ಮೇಲೆ ಖರೀದಿ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಾಂತ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದಲ್ಲಾಳರ ವಂಚನೆ ನಿಲ್ಲಬೇಕು ಜೊತೆಗೆ ದಲ್ಲಾಳರು ನೀಡಿರುವ ರೈತರ ಹೆಸರಿನ ದಾಖಲೆಗಳನ್ನು ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರ ಬೆವರ ಹನಿಯ ಬೆಂಬಲ ಬೆಲೆ ರೈತರಿಗೆ ಸಿಗಬೇಕು ಇಲ್ಲವಾದರೆ ರಾಗಿ ಖರೀದಿ ಕೇಂದ್ರಗಳ ಹಗಲು ದರೋಡೆ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತ ದೂರು ನೀಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರು ರಾಗಿ ಖರೀದಿಯಲ್ಲಿ ಅವ್ಯವಸ್ಥೆ ಇರುವುದು ನಿಜ ರೈತರ ಹೆಸರಿನಲ್ಲಿ ದಲ್ಲಾಳರು ದಾಖಲೆಗಳನ್ನು ನೀಡಿ ರಾಗಿಯನ್ನು ತರುತ್ತಿದ್ದಾರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್‍ಕುಮಾರ್, ವಿಶ್ವ, ವಿಜಯ್‍ಪಾಲ್, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ಜುಬೇರ್‍ಪಾಷ, ಆದಿಲ್‍ಪಾಷ, ವೇಣು, ಹೆಬ್ಬಣ್ಣಿ ಆನಂದರೆಡ್ಡಿ ಸುಪ್ರಿಂ ಚಲ, ರಂಜಿತ್, ಸುರೇಶ್, ಗೋಪಿ, ಹರಿ, ಗುರುಮೂರ್ತಿ ಸಂದಿಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಮುಂತಾದವರು ಇದ್ದರು.