ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಬಾಲ ಪ್ರತಿಭೆ ಬೋಳ ಹನ್ಸಿಕಾ ಹಾಡಿ ಅಭಿನಯಿಸಿರುವ “ಕರುನಾಡ ಕನ್ನಡಿಗರು” ಆಲ್ಬಂ ಗೀತೆಯ ಬಿಡುಗಡೆ ಸಮಾರಂಭವು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರಲ್ಲಿ ಜರಗಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ದೈವ ನರ್ತಕರು ಹಾಗೂ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಬೋಳ ನಾರಾಯಣ ನಲ್ಕೆ ಸಮಾರಂಭವನ್ನು ಉದ್ಘಾಟಿಸಿದರು. ಬೆಳ್ಮಣ್ಣು ಹುಮ್ಯಾನಿಟಿ ಟ್ರಸ್ಟ್‍ನ ಸಂಸ್ಥಾಪಕರಾದ ರೋಶನ್ ಬೆಳ್ಮಣ್ಣು ಆಲ್ಬಂ ಗೀತೆಯ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪಡುಬಿದ್ರಿ ಅಂಬೇಡ್ಕರ್ ಭವನದ ಅಧ್ಯಕ್ಷರು ಹಾಗೂ ಕಾಪು ಅಂಬೇಡ್ಕರ್ ಯುವಸೇನೆಯ ಗೌರವಾಧ್ಯಕ್ಷರಾದ ಕೃಷ್ಣ ಬಂಗೇರ, ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ವೀಣೇಶ್ ಅಮೀನ್, ಆಕಾಶವಾಣಿ ಕಲಾವಿದೆ ಭಾರತಿ ಟಿ.ಕೆ., ಕೊಚ್ಚಕ್ಕಿ ಕುಡಿಗಳು ಫೇಸ್‍ಬುಕ್ ಫೇಜ್‍ನ ನಿರ್ವಾಹಕರಾದ ರವೀಂದ್ರ ಗುಲ್ವಾಡಿ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿಯವರು ಸ್ವಾಗತಿಸಿದರು. ಟಿವಿ ನಿರೂಪಕಿ ಪ್ರಜ್ಞಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಯುವರತ್ನ ಪ್ರಶಸ್ತಿ ಪುರಸ್ಕøತ ಗಾಯಕಿ ನಮಿತಾ ಬೋಳ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ತಾನ್ ಮ್ಯೂಸಿಕ್ ಇವರಿಂದ ಸುಮಧುರಗೀತೆಗಳ ಸಂಗೀರ ರಸಮಂಜರಿ ಕಾರ್ಯಕ್ರಮ ಜರಗಿತು.