JANANUDI.COM NETWORK
ಕುಂದಾಪುರ, ಮೇ.28: ವಸಂತ ಪ್ರೋಡಕ್ಷನ್ ಹೌಸ್ ಇವರ ನಿರ್ಮಾಪಕತ್ವದಲ್ಲಿ ತಯಾರಾಗುವ “ಬಾಲವನದ ಜಾದೂಗಾರ”ಎಂಬ ಸಿನಿಮಾವು ಕೋಟ ತಟ್ಟು ಶಿವರಾಮ ಕಾರಂತರ ಧೀಂ ಪಾರ್ಕಿನಲ್ಲಿ ಚಿತ್ರೀಕರಣ ಆರಂಭವಾಯಿತು.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಸಚಿವ ಮಾನ್ಯ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರು ಕ್ಯಾಮರ ಸ್ವೀಚ್ ಒನ್ ಮಾಡಿ ಚಿತ್ರಿಕರಕ್ಕೆ ಚಾಲನೆ ನೀಡಿ “ನಮ್ಮ ನಾಡಿನ ಶಿವರಾಮ ಕಾರಂತರು ಮಹತ್ತರ ಸಾಧಾನೆ ಮಾಡಿದವರು. ಅವರ ಹಿನ್ನೆಲೆಯನ್ನು ಇಟ್ಟುಕೊಂಡು ಒಂದು ಸಿನೆಮಾ ಮಾಡುವುದು ನಿಜಕ್ಕೂ ಶ್ಲಾಘನೀಯ, ಶಿವರಾಮ ಕಾರಂತರ ಬದುಕು, ಸಾಹಿತ್ಯ ನಮ್ಮ ಮುಂದಿನ ಜನಾಂಗಕ್ಕೆ ಇನ್ನಷ್ಟು ತಿಳಿಯುವಂತಾಗಲಿ, ನೆರೆಯ ರಾಜ್ಯದ ಬರಹಗಾರ ಕಾರಂತರ ಮೇಲೆ ಪ್ರಭಾವಕ್ಕೆ ಒಳಗಾಗಿ ಅವರೇ ಚಿತ್ರಕತೆ ಬರೆದು ಸಿನಿಮಾ ಮಾಡುತ್ತಾರೆಂದರೆ, ಅದೊಂದು ಭಾಗ್ಯವೆ ಸರಿ’ ಎಂದು ಹೇಳಿ ಸಿನಿಮಾಕ್ಕೆ ಯಶಸ್ಸು ಲಭಿಸಲಿ ಎಂದು ಹಾರೈಸಿದರು.
ಸಿನಿಮಾ ಕತೆಗಾರ, ನಿರ್ದೇಶಕ ಇ.ಎಮ್.ಅಶ್ರಫ್, ಎ.ಸಿ. ಕುಂದರ್, ಕಾರಂತ ಪ್ರತಿಷ್ಟಾನದ ಕಾರ್ಯಾಧ್ಯಕ್ಷರು. ಕೋಟ ತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ, ಅಶ್ವಿನಿ ದಿನೇಶ್.ವೆಂಕಟರಮಣ ಆಂಗ್ಲಾ ಮಾದ್ಯಮ ಶಾಲಾ ಸಂಚಾಲಕರಾದ ಕೆ.ರಾಧಕ್ರಷ್ಣ ಶೆಣೈ. ಎ.ಎಸ್.ಎನ್. ಹೆಬ್ಬಾರ್, ಹಿರಿಯ ವಕೀಲರು. ಕೆ.ಎಸ್. ಕಾರಂತ್, ಮನೋತಜ್ನ ವೈದ್ಯರು ಇವರುಗಳು ಸಿನಿಮಾ ಬಗ್ಗೆ ಮಾತನಾಡಿ ಶುಭ ಕೋರಿದರು
ನೀಲಾವರ ಸುರೇದ್ರ ಅಡಿಗ, ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷರು, ನರೇಂದ್ರ ಕುಮಾರ್,ಕಾರ್ಯದರ್ಶಿ ಕೋಟ ಶಿವರಾಮ ಕಾರಂತ ಟ್ರಷ್ಟ್, ನಮ್ಮ ಭೂಮಿ ಸಂಚಾಲಕರು, ಟಿ.ಕೆ.ರಾಜನ್ ಅಧ್ಯಕ್ಷರು ಕೇರಳ ಸಮಾಜ ದ.ಕ. ಜಿಲ್ಲೆ. ಪಿ.ಜಿ.ಥೋಮಸ್ ಕಾರ್ಯದರ್ಶಿ ಕೇರಳ ಸಮಾಜ ದ.ಕ ಜಿಲ್ಲೆ, ಬಿನೇಶ್. ಕಾರ್ಯದರ್ಶಿ ಕೇರಳ ಸಮಾಜ ಉಡುಪಿ ಜಿಲ್ಲೆ, ಡಾ|ಪಾರ್ವತಿ ಜಿ.ಐತಾಳ್ ಮುಂತಾದವರು ಉಪಸ್ಥಿತರಿದ್ದರು.
ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಶನ್ ವಂದಿಸಿದರು, ಹಿರಿಯ ಪತ್ರಕರ್ತ ಯು.ಎಸ್. ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರದಲ್ಲಿ ಜೊತೆ ನಿರ್ಮಾಪಕನಾಗಿ ಅಬ್ದುಲ್ ಸತ್ತಾರ್, ಕಣ್ಣೂರ್, ಕ್ರೀಯಾತ್ಮಕ ಬೆಂಬಲ ಮನ್ಸೂರ್ ಹಳ್ಳೂರು, ಛಾಯಗ್ರಹಣ ಆರ್.ಕೆ.ಮಂಗಳೂರು, ಚಿತ್ರಕತೆ ಸಾಂಬಾಷಣೆ ಡಾ|ಪಾರ್ವತಿ ಜಿ.ಐತಾಳ್. ಸಂಪಾದಕ ಹಾಗೂ ಬಣ್ಣ ಹರಿ ಜಿ.ನಾಯರ್, ಸ್ಟುಡಿಯೋ ಆಮೆಟ್, ಜೊತೆ ನಿರ್ದೇಶನ ಶೈಜು ದೇವದಾಸ್, ಸಹ ನಿರ್ದೇಶನ ಜೆಸ್ಸಿ ಎಲಿಜಬೆತ್, ಸಂಗೀತ ಫಿಡೆಲ್ ಅಶೋಕ್, ನಿರ್ಮಾಣ ಸಂಯೋಜಕ ಜೋಯ್ ಜೆ.ಕರ್ವಾಲ್ಲೊ.
ಹಾಗೂ ಮುಖ್ಯ ಭೂಮಿಕೆಯಲ್ಲಿ ಬಾರ್ಕೂರಿನ ಬಾಲ ನಟ ಎರ್ಯಾನ್ ಮಾಥ್ಯು ಪಾಯ್ಸ್ ನಟನೆ ಮಾಡಲಿದ್ದಾರೆ, ಅದರ ಜೊತೆ ಸುಮಾರು ಮುವತ್ತು ಕುಂದಾಪುರ ಆಸುಪಾಸಿನ ಮಕ್ಕಳು ಮತ್ತು ಹಿರಿಯರು ನಟಿಸಲಿದ್ದಾರೆ.