ಶ್ರೀನಿವಾಸಪುರ 3 : ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಸ್ಕಾರ ಬೆಳಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖೀಯಾಗಿ ಬದುಕಲು ಸಾಧ್ಯ ಎಂದು ಆದಿಚುಂಚುನಿಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮಿಜಿ ಹೇಳಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಬುಧವಾರ ಮಕ್ಕಳ ಅಕ್ಷರ ಕಲಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ . ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ ಎಂದರು.
ಪ್ರತಿಯೊಂದು ಮಗುವಿಗೂ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತರೆ ಮುಂದಿನ ವಿದ್ಯಾಭ್ಯಾಸಕ್ಕೆ ಅದೇ ಭದ್ರಬುನಾದಿ ಆಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.
ಪಾಲಕರು ತಮ್ಮ ಮಕ್ಕಳ ಬೆಳವಣಿಗೆಯಂತೆ ಅವರ ವಿಧ್ಯಾಬ್ಯಾಸ ಹಾಗು ಆಸ್ತಿ ಇತರೆ ಅನೇಕ ರೀತಿಯಲ್ಲಿ ಕನಸ್ಸನ್ನು ಕಂಡಿರುತ್ತಾರೆ. ಪಾಲಕರು ತಮ್ಮ ಕನಸನ್ನು ನನಸು ಮಾಡಿಸುವ ರೀತಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ . ಪಾಲಕರ ಕನಸನ್ನು ನನಸು ಮಾಡುವ ರೀತಿಯಲ್ಲಿ ಮಕ್ಕಳು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಬೈರವೇಶ್ವರ ವಿದ್ಯಾನಿಕೇತನದ ಶಾಲಾ ಕಾಲೇಜುಗಳ ಆಡಳಿತಾಧಿಕಾರಿ ಶಿವರಾಮೇಗೌಡ, ಅರಣ್ಯ ಇಲಾಖೆಯ ಆರ್‍ಎಫ್‍ಒ ಮಹೇಶ್, ಶ್ರೀನಿವಾಸಪುರ ಬೈರವೇಶ್ವರ ಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಶಿಕ್ಷಣ ಚಿಂತಕರಾದ ಮಂಜುಳ, ಪ್ರಾಂಶುಪಾಲ ಗಂಗಾಧರ್, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ ಹಾಗೂ ಮಕ್ಕಳು ಪೋಷಕರು ಪಾಲ್ಗುಂಡಿದ್ದರು.