JANANUDI.COM NETWORK

ನವದೆಹಲಿ,ಮೇ. 27: ಯೋಗ ಬಾಬಾ ರಾಮ್ ದೇವ್ ಗುರುವಿನ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ ಹತ್ತಿದೆ, ಅದರಲ್ಲಿ ಅವರು ತನ್ನನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸವಾಲು ಹಾಕಿ. ನನ್ನನ್ನು ಅವರಪ್ಪನನ್ನು ಬಂದಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ
ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ರಾಮ್ ದೇವ್ ತಮ್ಮ ವಿವಾದಾತ್ಮಕ ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಈ ವಿಡಿಯೋ ವೈರಲ್ ಆಗಿದೆ. ‘ಖೈರ್, ಬಂಧನ್ ತೋ ಉನ್ಕಾ ಬಾಪ್ ಭೀ ನಹಿ ಕರ್ ಸಕ್ತಾ ಹೈ, ಸ್ವಾಮಿ ರಾಮದೇವ್ ಕೋ (ಅವರ ಅಪ್ಪ ಕೂಡ ಸ್ವಾಮಿ ರಾಮದೇವ್ ಅವರನ್ನು ಬಂಧಿಸಲು ಸಾಧ್ಯವಿಲ್ಲ) ಎಂದು ಹುಡುಗಿದ್ದಾರೆ
ಅಲೋಪತಿಯನ್ನು ವಿಜ್ಞಾನವನ್ನು ‘ಮೂರ್ಖ ವಿಜ್ಞಾನ’ ಎಂದು ಜರೆದು, ಅಲೋಪತಿ ಔಷಧಿಗಳನ್ನು ಸೇವಿಸಿದ ನಂತರ ಲಕ್ಷಾಂತರ ಜನರು ಸತ್ತಿದ್ದಾರೆ ಎಂದು ಆರೋಪಿಸಿದ ನಂತರ ರಾಮದೇವ್ ಅವರನ್ನು ಬಂಧಿಸುವಂತೆ ಟ್ವಿಟರ್ ನಲ್ಲಿ ಹಲವರು ಟ್ವೀಟ್ ಮಾಡುತ್ತಿದ್ದಾರೆ. ಹಾಗೆಯೇ ಆಧುನಿಕ ಔಷಧವನ್ನು ‘ಮೂರ್ಖ ವಿಜ್ಞಾನ’ ಎಂದು ಬಣ್ಣಿಸಿದ ನಂತರ ಕಳೆದ ಕೆಲವು ದಿನಗಳಿಂದ ಭಾರತೀಯ ವೈದ್ಯಕೀಯ ಸಂಘ ಮತ್ತು ರಾಮದೇವ್ ನಡುವಿನ ವಾಕ್ಸಮರ, ವೈದ್ಯಕೀಯ ಒಕ್ಕೂಟ ಅವರ ಮೇಲೆ 1000 ಕೋಟಿ ಮಾನ ನಷ್ಟದ ನೋಟಿಸ್ ಜಾರಿ ಮಾಡಿದಂತ್ತೆ, ಸಂಘರ್ಷ ಉಲ್ಬಣಗೊಂಡಿದೆ.