ಸ್ವಚ್ಛತಾ ಶ್ರಮದಾನದ ಜೊತೆಗೆ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳುವ ಅರಿವು ಮೂಡಿಸಬೇಕು -ಬಿಎನ್‍ಯು ಉಪಕುಲಪತಿ ಪ್ರೊ |ನಿರಂಜನ ವಾನಳ್ಳಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸ್ಥಳೀಯರಲ್ಲಿ ಜಾಗೃತಿ ಅರಿವು ಉಂಟು ಮಾಡಬೇಕೆಂದು ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಪ್ರೊ|ನಿರಂಜನ ವಾನಳ್ಳಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಸೇವಾ ಕಾರ್ಯಕ್ರಮ ಶಿಬಿರದಲ್ಲಿ ಅಂತರಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ, ಹಾಗೆಯೇ ಅಂತರಗಂಗೆ ಬೆಟ್ಟ ಪರಿಸರವನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸ್ಥಳೀಯರು, ಪ್ರವಾಸಿಗರಿಗೆ ಅರಿವು ಮೂಡಿಸುವುದರಿಂದ ಮಾತ್ರವೇ ಸ್ವಚ್ಛತಾ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಸಫಲತೆ ಕಾಣಲು ಸಾಧ್ಯವೆಂದು ಹೇಳಿದರು.
ಬೆಂಗಳೂರು ಉತ್ತರ ವಿವಿ ಕುಲಪತಿಯಾಗಿ ತಾವು ಅ„ಕಾರ ಸ್ಪೀಕರಿಸಿದ ನಂತರ ವಿವಿಯ ಲಾಂಛನದ ಅರಿವು ಅಂತರಗಂಗೆ ಪದ ತಮ್ಮ ಬಹಳವಾಗಿ ಆಕರ್ಷಿಸಿತು, ಅಂತರಗಂಗೆ ಬೆಟ್ಟವನ್ನು ಮೊದಲು ವೀಕ್ಷಿಸಲು ಹೋದೆ ಆದರೆ, ಅಲ್ಲಿನ ಅವ್ಯವಸ್ಥೆ ಮತ್ತು ಕಸದ ರಾಶಿ ಬೇಸರ ನಿರಾಸೆಯನ್ನುಂಟು ಮಾಡಿತು ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿಯೇ ಅಂತರಗಂಗೆ ಬೆಟ್ಟದ ಸ್ವಚ್ಛತಾ ಆದ್ಯತಾ ಕಾರ್ಯಕ್ರಮವಾಗಬೇಕೆಂದು ಮನಗಂಡು ಎನ್‍ಎಸ್‍ಎಸ್ ಶಿಬಿರದ ಮೂಲಕ ಅಂತರಗಂಗೆಯನ್ನು ಸ್ವಚ್ಛ ಹಾಗೂ ಸುರಕ್ಷಿತ ತಾಣವಾಗಿಸಲು ಸೂಚಿಸಿದ್ದಾಗಿ ವಿವರಿಸಿದ ಅವರು, ತಮಗೂ ಸೇರಿದಂತೆ ಯಾವುದೇ ವಿದ್ಯಾರ್ಥಿಗೆ ಎನ್‍ಎಸ್‍ಎಸ್ ಶಿಬಿರದ ಪಾಲ್ಗೊಳ್ಳುವಿಕೆ ಜೀವನದ ಅವಿಸ್ಮರಣೀಯ ಘಟನೆಯಾಗಿ ಉಳಿಯುತ್ತದೆಯೆಂದರು.
ಎನ್‍ಎಸ್‍ಎಸ್ ಶಿಬಿರದ ಮೂಲಕ ಅಂತರಗಂಗೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅಲ್ಲಿ ಕಸದ ಬುಟ್ಟಿಗಳನ್ನು ಇಟ್ಟು ಸ್ಥಳೀಯರು, ಪ್ರವಾಸಿಗರು ಕಸವನ್ನು ಇಂತಹ ಬುಟ್ಟಿಗಳಲ್ಲಿ ಹಾಕುವಂತೆ ತಾಕೀತು ಮಾಡುವ ಮೂಲಕ ಅಂತರಗಂಗೆಯ ಚಿತ್ರಣವನ್ನು ಸಮಗ್ರವಾಗಿ ಬದಲಾಯಿಸಬೇಕೆಂದು ಅವರು ಸಲಹೆ ನೀಡಿ, ಈ ರೀತಿಯ ಕೆಲಸಕ್ಕೆ ಬಿಎನ್‍ಯು ಸದಾ ಜೊತೆಯಲ್ಲಿರುತ್ತದೆಯೆಂದು ಭರವಸೆ ನೀಡಿದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಅಂತರಗಂಗೆ ಶತಶೃಂಗ ಪರ್ವತಕ್ಕೆ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿದ್ದು, ಔಷಧೀಯ ಸಸ್ಯಗಳ ಆಗರವಾಗಿದೆ. ಇಂತಹ ಬೆಟ್ಟದ ಪರಿಸರವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ವಿದ್ಯಾರ್ಥಿಗಳು ವ್ಯಾಸಾಂಗ ನಂತರ ಸರಕಾರಿ ಕೆಲಸಕ್ಕಾಗಿ ಕಾಯದೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ಸ್ಥಳೀಯ ಕೃಷಿ, ತೋಟಗಾರಿಕೆಯ ಅಗತ್ಯಗಳನ್ನು ತಾವೇ ಉದ್ದಿಮೆ ಸ್ಥಾಪಿಸಿ ಪೂರೈಸುವಂತಾಗಬೇಕೆಂದು ಕಿವಿಮಾತು ಹೇಳಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಕ್ಕೆ ಅಂತರಂಗೆ ಬೆಟ್ಟಕ್ಕೆ ತೆರಳುವ ವಿದ್ಯಾರ್ಥಿಗಳು ಬೆಟ್ಟದ ಪರಿಸರದ ಸಮಗ್ರ ಚಿತ್ರಣವನ್ನು ಅರಿತುಕೊಳ್ಳಲು ಅಗನಾಗ್ ಸದಸ್ಯರ ನೆರವು ಪಡೆದುಕೊಳ್ಳಬೇಕು, ಕೋಲಾರ ಜಿಲ್ಲೆಯಲ್ಲಿ ಸ್ವಾತಂತ್ರ್ಯಾನಂತರ ಆರಂಭವಾದ ಮೊಟ್ಟ ಮೊದಲ ಕಾಲೇಜಿನ ಹೆಗ್ಗಳಿಕೆ ಹೊಂದಿರುವ ಪ್ರಥಮ ದರ್ಜೆ ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ರೂಪಿಸಿ ಜನಪ್ರತಿನಿ„ಗಳು, ಸಮಾಜಸೇವಕರು, ದಾನಿಗಳ ನೆರವಿನಿಂದ ಅನುಷ್ಠಾನಕ್ಕೆ ತರಬೇಕೆಂದರು.
ಬಿಎನ್‍ಯು ಶೈಕ್ಷಣಿಕ ಸಮಿತಿ ಸದಸ್ಯ ಕೆ.ಎಸ್.ಮಹೇಶ್‍ಬಾಬು ಮಾತನಾಡಿ, ಎನ್‍ಎಸ್‍ಎಸ್ ಶಿಬಿರ ಮತ್ತು ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಧುಲತಾ ಮೋಸಸ್ ಮಾತನಾಡಿ, ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆಯೆಂದರು.
ಪ್ರಾಸ್ತಾವಿಕವಾಗಿ ರಾಜ್ಯ ಶಾಸ ಸಹ ಪ್ರಾಧ್ಯಾಪಕ ಡಾ.ಆರ್.ಶಂಕರಪ್ಪ ಮಾತನಾಡಿ, ಎನ್‍ಎಸ್‍ಎಸ್ ಶಿಬಿರದ ಧ್ಯೇಯೋದ್ದೇಶಗಳ ಕುರಿತಂತೆ ವಿವರಿಸಿದರು.
ಶಿಬಿರಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಬಿಎನ್‍ಯು ಉಪ ಕುಲಪತಿ ನಿರಂಜನ ವಾನಳ್ಳಿ ಮತ್ತು ಅತಿಥಿಗಳು ಕಾಲೇಜಿನ ಆವರಣದಲ್ಲಿ ಮೂರು ಸಸಿಗಳನ್ನು ನೆಟ್ಟರು.
ಎನ್‍ಎಸ್‍ಎಸ್ ಆಶಯ ಗೀತೆಯನ್ನು ಪೂಜಾ ಹಾಡಿದರು.
ಶಿಬಿರಾ„ಕಾರಿಗಳಾದ ಪ್ರವಾಸೋದ್ಯಮ ಸಹಾಯಕ ಪ್ರಾಧ್ಯಾಪಕ ಆರ್.ಮಹೇಶ್ ಸ್ವಾಗತಿಸಿ ನಿರೂಪಿಸಿ, ಪೆÇ್ರ.ಕೆ.ಎನ್.ಶ್ರೀನಿವಾಸಗೌಡ ವಂದಿಸಿದರು.
ಏಳು ದಿನಗಳ ಈ ಶಿಬಿರದ ಮೂಲಕ ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂತರಗಂಗೆ ಬೆಟ್ಟದ ಪರಿಸರವನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದ್ದಾರೆ.