ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : – ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತೀರಿ ಎಂದು ಎಚ್ಚರಿಸಿದ ಆರೋಗ್ಯ ಇಲಾಖೆಯ ತಂಬಾಕು ನಿಯಂತ್ರಣ ಅಧಿಕಾರಿ ಮಹಮದ್ , ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು . ತಾಲ್ಲೂಕಿನ ತೊರದೇವಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ.ಜಿಲ್ಲಾ ತಂಬಾಕು ನಿಯಂತ್ರಣ ಘಟಕಗಳ ಆಶ್ರಯದಲ್ಲಿ ( ಕೋಟ್ಟಾರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು . ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಅನಾಹುತಗಳ ಕುರಿತು ಮಕ್ಕಳನ್ನು ಎಚ್ಚರಿಸಿದ ಅವರು , ಕೋವಿಡ್ ಸಂದರ್ಭದಲ್ಲಿ ಧೂಮಪಾನ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಉಸಿರಾಟದ ಸಮಸ್ಯೆಗೆ ತುತ್ತಾಗಿ ಸಾವನ್ನಪ್ಪಿದ್ದನ್ನು ಉದಾಹರಿಸಿದರು . ಶಾಲಾವರಣದಿಂದ ೨೦೦ ಮೀ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧವಾಗಿದ್ದು , ಎಲ್ಲಾದರೂ ಇಂತಹ ಅಂಗಡಿಗಳು ಕಂಡು ಬಂದರೆ ಪೋಲಿಸರಿಗೆ ಮಾಹಿತಿ ನೀಡಿ ಎಂದರು . ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎ.ಮುರಳಿಮೋಹನ್ , ವಿದ್ಯಾರ್ಥಿಗಳು ಬೀಡಿ , ಸಿಗರೇಟು ಸೇವನ , ಹನ್ಸ್ಪಾನ್ ಪರಾಗ್ ನಂತಹ ಅನಾರೋಗ್ಯ ಕಾರಕ ಉತ್ಪನ್ನಗಳನ್ನು ಬಳಸದಿರಿ , ಇದರಿಂದ ನಿಮ್ಮ ಆರೋಗ್ಯ ನಾಶದ ಜತೆಗೆ ನಿಮ್ಮಲ್ಲಿ ಜ್ಞಾಪಕ ಶಕ್ತಿಂ ಕುಂದಿ ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು . ಕಾಂರ್ಯ ಕಮದಲ್ಲಿ ಪ್ರಭಾರ ಮುಖ್ಯಶಿಕ್ಷಕ ಮೋಹನಾಚಾರಿ ಅಧ್ಯಕ್ಷತೆ ವಹಿಸಿದ್ದು , ಶಿಕ್ಷಕರಾದ ಮರಿಯಪ್ಪ ಶೈಲಾವತಿ , ವಿಜಯಲಕ್ಷ್ಮಿ , ಸೈಯದ್ ಗೌಸ್ ಅನಿತಾ ಹತಾರ್ ಮತ್ತಿತರರಿದ್ದರು .