

ಕುಂದಾಪುರ(ಜ.8): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್. ಎಸ್. ರಾವ್ ಮತ್ತು 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ ಶೆಟ್ಟಿಗಾರ್ ತಮ್ಮ ವಿಶಿಷ್ಟ ಸಾಧನೆಗಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ʼಕಾರಂತ ಬಾಲ ಪುರಸ್ಕಾರʼ ವನ್ನು ಡಿಸೆಂಬರ್ 28 2024ರಂದು ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಕಾರಂತ ಬಾಲ ಪುರಸ್ಕ್ರತ ಪ್ರತಿಭೆಗಳನ್ನು ಅಭಿನಂದಿಸಿದರು