

ಕುಂದಾಪುರ: ಅಭಿವೃದ್ಧಿ ಪಥದಲ್ಲಿರುವ ಕುಂದಾಪುರದ ಪರಿಸರಕ್ಕೆ ಆಟೋ ರಿಕ್ಷಾ, ಟ್ಯಾಕ್ಸಿ ,ಸೇವೆಯ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು.ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 42ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಂಘಟಿತರಾಗಿ ಸವಾಲುಗಳನ್ನು ಎದುರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಹೊಸ ಸದಸ್ಯರ ನೋಂದಣಿಗೆ ಸಹಕರಿಸ ಬೇಕು ಎಂದು ಹೇಳಿದರು ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಚಂದ್ರಶೇಖರ್ ಶೇರಿಗಾರ (ಅಣ್ಣಪ್ಪಣ್ಣ) ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಅವರನ್ನ ಸನ್ಮಾನಿಸಿ , ಗೌರವಿಸಲಾಯಿತು.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಾಣಿ ಉದಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸದಸ್ಯರಾದ ಚಂದ್ರ ಆಚಾರಿ ಮತ್ತು ಅಬ್ಬು ಸಾಲ್ಯಾರವರಿಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.
ಸಭೆಯಲ್ಲಿ ಗೌರವ ಅಧ್ಯಕ್ಷರಾದ ಭಾಸ್ಕರ ಪೂಜಾರಿ ವಕ್ವಾಡಿ, ಉಪಾಧ್ಯಕ್ಷರಾದ ಶಂಕರ್ ಕುಂದರ್, ಮಹಾಬಲ, ಶೇಖರ್ ಪೂಜಾರಿ, ಜೇಮ್ಸ್ ರೆಬೆರೋ ಭಾಸ್ಕರ್ ಶೇರಿಗಾರ ,ವಿ ಎನ್.ಗುಂಡು ಪಾರಿಜಾತ ,ಜೊತೆ ಕಾರ್ಯದರ್ಶಿ ಅಸ್ಲಾಂ, ಆಲ್ಫೋನ್ಸ್ ಕ್ರಾಸ್ತ, ವಿಜಯ ಪೂಜಾರಿ ,ಸಲಹೆಗಾರರಾದ ಗೋಪಾಲ ಪೂಜಾರಿ, ಜಯರಾಮ ಶೆಟ್ಟಿ ಕಾಳಾವರ ಅಣ್ಣಪ್ಪ ಶೇರಿಗಾರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮಹಾಸಭೆಗೆ ಸದಸ್ಯರಾದ ಸದಾನಂದ ಶೇರಿಗಾರ್ ಸ್ವಾಗತಿಸಿ ಜನಾರ್ದನ್ ಖಾರ್ವಿಯವರು ವಂದಿಸಿದರು.



