

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪದವೀಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಾರುತಿ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ,(ಪದವೀಪೂರ್ವ) ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ನಂತರ ಮಾತನಾಡಿ ಸಾಧನೆಯ ಹಾದಿ ಸುಗಮವಲ್ಲ ಛಲವಿದ್ದವರೂ ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತಿ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ ಪ್ರತಿಭೆ ಎಲ್ಲರಲ್ಲೂ ಇದೆ ಆದರೇ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಸಾಧನೆಯ ಹಾದಿಯನ್ನು ಏರುವ ತುಡಿತ ನಮ್ಮಲ್ಲಿರಬೇಕು ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಗ್ರಾಮೀಣ ಭಾಗದಲ್ಲಿ ಕಳೆದ 26 ವರ್ಷಗಳಿಂದ ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಮೌಲ್ಯಾಧಾರಿತ ಶಿಕ್ಷಣ ಮತ್ತು ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಪಾಲಕ ಪೋಷಕರಿಗೆ ಫಲಿತಾಂಶದ ಹೊರೆಯನ್ನು ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹಾಕಕೂಡದು ನಿಯಮಿತವಾದ ಆಹಾರ, ನಿದ್ರೆ, ನಿರಂತರ ಕಲಿಕಾ ಕ್ರಮದಿಂದ ಪರೀಕ್ಷೆಯಲ್ಲಿ ಗುಣಾತ್ಮಕ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು ಯಾವುದೇ ಕಾರಣಕ್ಕೂ ಟಿವಿ ಮೊಬೈಲ್ಗಳಿಂದ ದೂರವಿರಿ ಪಾಲಕರು ಮನೆಯಲ್ಲಿ ಮಕ್ಕಳಿಗೆ ಒತ್ತಡರಹಿತ ಕಲಿಕಾ ಸನ್ನಿವೇಶವನ್ನು ನಿರ್ಮಿಸಿ ಅವರ ಚಲನವಲನಗಳನ್ನು ಆಗಾಗ ಗಮನಿಸಿ ಅವರಿಗೆ ಸಹಕಾರವನ್ನು ನೀಡಬೇಕು ಎಲ್ಲರೂ ಒಟ್ಟಿಗೆ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸೋಣ ಎಂದರು ಸಾಂಸ್ಕೃತಿಕ ಸ್ಪರ್ಧ,ಕ್ರೀಡೆ,ಆಟೋಟ ಹಾಗೂ ಇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪಾರಿತೋಷಕವನ್ನು ಪ್ರದಾನ ಮಾಡಲಾಯಿತು ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧಿಕಾರಿದ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಭೋ, ಪಾಲಕರು ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಉಪನ್ಯಾಸಕಿ ಗೀತಾ ಸ್ವಾಗತಿಸಿ ಉಪನ್ಯಾಸಕ ಮಂಜುನಾಥ್ ಬಾಯರಿ ವಂದಿಸಿ ಉಪನ್ಯಾಸಕಿ ವೈಶಾಲಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







