ಕಲ್ಯಾಣಪುರ ಸಂತೇಕಟ್ಟೆ ಮೌಂಟ್ ರೋಸರಿ ಚರ್ಚ್‌ನಲ್ಲಿ ಬೈಬಲ್ ಭಾನುವಾರ ಆಚರಣೆ / Bible Sunday celebration at Mount Rosary Church, Santhekatte, Kalyanpur

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಜೂನಿಯರ್ ಆಫೀಸರಿಂದ ಧ್ವಜಾರೋಹಣ

ಕುಂದಾಪುರ ಯೋಜನಾ ಪ್ರಾಧಿಕಾರ ಕಛೇರಿಗೆ ಪೂರ್ಣ ಅವಧಿಯ ಅಧಿಕಾರಿ ನೇಮಕ

ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ಹಬ್ಬದ ಎರಡನೇ ದಿನ / Second Day of the Feast at Attur St. Lawrence Basilica

ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬೆಸಿಲಿಕಾದ ವಾರ್ಷಿಕ ಹಬ್ಬವು ಸಂತ ಲಾರೆನ್ಸ್ ಅವರ ಅದ್ಭುತ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡು ಹೋಗಿ ಹಬ್ಬದ ಮೊದಲ ದಿನ ಆರಂಭ/ The annual festival of St. Lawrence Basilica in Attur Karkala begins on the first day of the festival with a procession carrying the magnificent statue of St. Lawrence.

Î

ಸಿ.ಮರಿಯಾ ನವೀನಾ ಕರ್ನಾಟಕ ಪ್ರಾಂತ್ಯದ ಅಪೋಸ್ಟೋಲಿಕ್ ಕಾರ್ಮೆಲ್‌ನ ಪ್ರಾಂತೀಯ ಸುಪೀರಿಯರ್ ಆಗಿ ಆಯ್ಕೆ / Sr Maria Naveena is the newly elected Provincial Superior of the Apostolic Carmel, Karnataka Province

ಕುಂದಾಪುರ:ಯು ಬಿ ಎಂ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

ಕುಂದಾಪುರದಲ್ಲಿ 76ನೇ ಗಣರಾಜ್ಯೋತ್ಸವದ೦ದು ರಾಷ್ಟ್ರಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ


ಕುಂದಾಪುರದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದದಂದು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ನೀಡುವ ಉದ್ದೇಶದಿಂದ ಸನ್ಮಾನಿಸಲಾಯಿತು
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕುಂದಾಪುರದ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಯೋಗ ಪಟು, ಯೋಗಕುಮಾರಿ ಬಿರುದಂಕಿತ ಲಾಸ್ಯ ಮಧ್ಯಸ್ಥ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈಕೆ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, ಲತಾ ಮಧ್ಯಸ್ಥ ಮತ್ತು ಅರುಣ ಮಧ್ಯಸ್ಥ ದಂಪತಿಗಳ ಪುತ್ರಿ ಆಗಿದ್ದಾಳೆ.

ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ.

ಕುಂದಾಪುರ (ಜ.26): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ. ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ಭಾರತದ 76ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಆಗಿರುವ ಶ್ರೀಮತಿ ವಿಲ್ಮಾ ಡಿ.ಸಿಲ್ವ, ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೆ ಗೈದು, ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಶುಭ ಸಂದೇಶವನ್ನು ತಿಳಿಸಿದರು. ಶಿಕ್ಷಕಿ ಆಶಾ ಎಸ್ ಗಣರಾಜ್ಯೋತ್ಸವದ ಮಹತ್ವ ಮತ್ತು ಆ ನಿಟ್ಟಿನಲ್ಲಿ ಭಾರತೀಯರಾಗಿ, ಶಿಕ್ಷಕರಾಗಿ ತಮ್ಮ ಜವಾಬ್ದಾರಿಗಳನ್ನು ನೆನಪಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕಿ ಸರೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.