ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಅಧ್ಯಕ್ಷರಾಗಿ ವಿಜಯ್ ಕುಮಾರ್,ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋ ಆಯ್ಕೆ

ಪಿಎಲ್‍ಡಿ ಬ್ಯಾಂಕ್‍ಗೆ 14 ನಿರ್ದೇಶಕರು ಅವಿರೋಧವಾಗಿ ಆಯ್ಕೆ ಅಧ್ಯಕ್ಷರಾಗಿ ದಿಂಬಾಲ್ ಅಶೋಕ್‍, ಉಪಾಧ್ಯಕ್ಷರಾಗಿ ಕೋಡಿಪಲ್ಲಿ ಸುಬ್ಬಿರೆಡ್ಡಿ ಆಯ್ಕೆ

ಶ್ರೀನಿವಾಸಪುರ : ಚುನಾವಣಾಧಿಕಾರಿ ಅಬೀದ್‍ಹುಸೇನ್ ಮಾತನಾಡಿ ಪಿಎಲ್‍ಡಿ ಬ್ಯಾಂಕ್‍ಗೆ 14 ನಿರ್ದೇಶಕರು ಹಾಗು ನಾಮನಿರ್ದೇಶಕ ಒಂದು ಸ್ಥಾನವು ಇದ್ದು, ಒಟ್ಟು 15 ನಿರ್ದೇಶಕರು. ಇದೇ ಜನವರಿ 14 ರಂದು ಬ್ಯಾಂಕಿನ ಆಡಳಿತ ಮಂಡಲಿಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿ ಎಲ್ಲಾ 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಬುಧವಾರ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಿಂಬಾಲ್ ಅಶೋಕ್ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಕೋಡಿಪಲ್ಲಿ ಸುಬ್ಬಿರೆಡ್ಡಿ ರವರು ಏಕೈಕ ನಾಮಪತ್ರ ಸಲ್ಲಿಸಿದ್ದು, ನಾಮಪತ್ರವು ಸಲ್ಲಿಸಿಲಾಗಿ 2 ನಾಮಪತ್ರಗಳು ಕ್ರಮವಾಗಿ ಇರುವುದರಿಂದ ಅಧ್ಯಕ್ಷರಾಗಿ ದಿಂಬಾಲ್ ಅಶೋಕ್‍ರವರು ಹಾಗು ಉಪಾಧ್ಯಕ್ಷರಾಗಿ ಕೋಡಿಪಲ್ಲಿ ಸುಬ್ಬಿರೆಡ್ಡಿ ಮುಂದಿನ ಐದು ವರ್ಷಗಳು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಿಂಬಾಲ್ ಅಶೋಕ್ ಮಾತನಾಡಿ ಮಾಜಿ ಶಾಸಕ ಕೆ.ಆರ್.ರಮೇಶ್‍ಕಮಾರ್ ರವರ ಮಾರ್ಗದರ್ಶನದಂತೆ ನಾನು ಸತತ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ ಹಾಗು ಎಲ್ಲಾ ನಿರ್ದೇಶಕರ ಸಹಕಾರ, ಸಲಹೆಗಳನ್ನು ಪಡೆದು ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಳಿಸಿಕೊಂಡು ರೈತರಿಗೆ ಬೇಕಾದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಸೇರಿಸಿ ಬ್ಯಾಂಕ್‍ನ್ನು ಮಾದರಿ ಮಾಡುವುದಾಗಿ ಭರವಸೆ ನೀಡಿದರು.
ನಿರ್ದೇಶಕರಾದ ಕೆ.ಲಕ್ಷ್ಮಣರೆಡ್ಡಿ, ವೆಂಕಟಲಕ್ಷ್ಮಮ್ಮ, ಸಿ.ಮುನಿವೆಂಕಟಪ್ಪ, ಬಿ.ಸೀತಾರಾಮರೆಡ್ಡಿ, ಎಮ್.ಎನ್.ರೆಡ್ಡಪ್ಪ, ಬಿ.ವಿ.ಆದಿನಾರಾಯಣಪ್ಪ, ಶೋಭಾ ಕೆ.ಎ., ಜಿ.ಶ್ರೀನಿವಾಸಲು, ನರಸಿಂಹಯ್ಯ ಕೆ.ವಿ, ಜಿ.ಲಕ್ಷ್ಮಿದೇವಮ್ಮ, ಶಿವಮ್ಮ, ಜಿ.ಎಮ್.ವೆಂಕಟಾಚಲ, ನಾಮನಿರ್ದೇಶಕ ರಾಮಸ್ವಾಮಿಶೆಟ್ಟಿ , ವ್ಯವಸ್ಥಾಪಕಿ ಶೋಭಾ, ಲೆಕ್ಕ ಪರಿಶೋದಕ ವಿ.ಶ್ರೀನಿವಾಸ್, ಸಿಬ್ಬಂದಿಗಳಾದ ಮಂಜುನಾಥಚಾರಿ, ಕೆ.ವಿ.ನರೇಶ್, ರವೀಂದ್ರ ಇದ್ದರು.

ಅತ್ತೂರು ಕಾರ್ಕಳ ಸೇಂಟ್ ಲಾರೆನ್ಸ್ ಬೆಸಿಲಿಕಾ ದೇವಾಲಯದ ನಾಲ್ಕನೇ ದಿವಸದ ಹಬ್ಬ

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಭಕ್ತರ ಮಹಾಪ್ರವಾಹ

ಶ್ರೀ ಕುಪ್ಪಣ್ಣ ಹಾಯ್ಗೂಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ ಕಟ್ಟು, – ಮಹಾ ಘಂಟೆ ಲೋಕಾರ್ಪಣೆ, ಮಹಾ ಕುಂಭಾಭಿಷೇಕ,ವಾರ್ಷಿಕ ಹೂವಿನ ಪೂಜಾ ಕಾರ್ಯಕ್ರಮ ನಡೆಯಲಿರುವುದು

ಮೂಡ್ಲಕಟ್ಟೆ ಎಂಐಟಿಕೆಯು ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ಗೆ ನೋಂದಣಿ  ಮಾಡಿಕೊಂಡಿದೆ

ಕೊಂಕಣಿ ಲಿಪ್ಯಂತರಣಾಚೆರ್ ಕಾಮಾಸಾಳ್ – ಪಾಂಚ್ ಕೊಂಕಣಿ ಪುಸ್ತಕಾಂ ಮೊಕ್ಳಿಕ್

ಶಿಕ್ಷಕರ ಬೇಡಿಕೆಗಳಿಗೆ ಸಹಮತ ನೀಡಿ ಹೋರಾಟ ಮಾಡಲಾಗುವುದು-ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ

ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಕ್ರಾಸ್‍ನ ವಿವಾದತ್ಮಕ ಜಮೀನಿನ ಸ್ಥಳಕ್ಕೆ ಉಪವಿಭಾಗಧಿಕಾರಿ ಡಾ. ಮೈತ್ರಿ ಭೇಟಿ