ಶ್ರೀನಿವಾಸಪುರ : ಶ್ರೀನಿವಾಸಪುರ ಮೀಸಲು ಕ್ಷೇತ್ರವಾಗಿದ್ದು, ತಪ್ಪಿಸಿ, ಮುಳಬಾಗಿಲು ಕ್ಷೇತ್ರ ಮೀಸಲು ಕ್ಷೇತ್ರ ಮಾಡಿದರು. ಮುಂದಿನ ದಿನಗಳಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಮೀಸಲು ಕ್ಷೇತ್ರವಾಗಲಿದೆ ಎಂದು ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಭಾರತರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ರವರ ೬೮ನೇ ಮಹಾಪರಿನಿರ್ವಾಹಣ ದಿನದ ಪ್ರಯುಕ್ತ ಪ್ರತಿಮೆಗೆ ಮಾರ್ಲಾಪಣೆ ಮತ್ತು ಗೌರವ ಸಮರ್ಪಣೆ ಮಾಡಿ ಮಾತನಾಡಿದರು.
ಈ ವಿಧಾನ ಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ಎಸ್ಸಿ ಮೀಸಲು ಕ್ಷೇತ್ರವಾಗಲಿದೆ ಎಂದು ಭವಿಷ್ಯ ನುಡಿಯುತ್ತಾ ಈಗಾಗಲೇ ಈ ಕ್ಷೇತ್ರ ಮೀಸಲು ಕ್ಷೇತ್ರ ಆಗಬೇಕಿತ್ತು. ಕೆಲವು ಮಹನೀಯರ ಕೈವಾಡದಿಂದ ಅದು ಆಗಲಿಲ್ಲ ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಆಗಲಿದೆ. ೪೫ ವರ್ಷಗಳ ರಾಜಕಾರಣ ಇವರಿಬ್ಬರದೇ ಆಗಿತ್ತು, ಬದಲಾವಣೆ ಜಗತ್ತಿನ ನಿಯಮ ಬದಲಾವಣೆಯಾಗುತ್ತದೆಂದು ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಮಾಹಿತಿ ನೀಡಿದರು.
ನಾನೂ ಸಹ ಇದೇ ತಾಲ್ಲೂಕಿನವನಾಗಿದ್ದು, ಇಂದು ಡಾ||ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿದ್ದು ನನ್ನ ಪುಣ್ಯ ನನಗೆ ತುಂಬಾ ಸಂತೋಷವಾಗಿದೆ. ನಾನೂ ಸಹ ಈ ಪಾರ್ಕ್ ಅಭಿವೃದ್ದಿಗೆ ದಿವಂಗತ ಶ್ರೀನಿವಾಸನ್ ಇದ್ದಾಗ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಸಹಾಯ ಮಾಡುತ್ತೇನೆ. ಈ ಕ್ಷೇತ್ರ ನನ್ನ ಜನ್ಮ ಭೂಮಿ, ಕರ್ಮ ಭೂಮಿ ಎಂದಿಗೂ ಮರಿಯುವುದಿಲ್ಲ ಎಂದರು.
ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಡಾ||ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ ಅಂಬೇಡ್ಕರ್ ವಿಶ್ಪಕಂಡ ಮಹಾನ್ ಮನವತಾವಾದಿಯಾಗಿದ್ದಾರೆ. ಇವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಸಮ-ಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಇವರ ಆದರ್ಶ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಪ್ರಪಂಚವೇ ಮೆಚ್ಚುವಂತಹ ಸಂವಿಧಾನವನ್ನು ರಾಷ್ಟçಕ್ಕೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಕಲ್ಪನೆಯೊಂದಿಗೆ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಅಶಯವನ್ನು ಈಡೇರಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ದೇಶದಲ್ಲಿ ಬಸವಣ್ಣ ಬುದ್ದನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ಕೊಂಡಾಡಿದರು.
ಈ ಸಮಯದಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಪುರಸಭೆ ಅಧ್ಯಕ್ಷ ಬಿ.ಎಲ್. ಬಾಸ್ಕರ್. ಮುಖ್ಯ ಅಧಿಕಾರಿ ವಿ.ನಾಗರಾಜ್, ಕಂದಾಯ ಅಧಿಕಾರಿ ಎನ್.ಶಂಕರ್, ಆರೋಗ್ಯಧಿಕಾರಿ ಕೆ.ಜಿ. ರಮೇಶ್. ಪರಿಸರ ಅಭಿಯಂತರರು ಲಕ್ಷ್ಮಿಶ, ಸದ್ಯಸ ನರಸಿಂಹ, ನಾಗರಾಜ್, ಪಿ .ಎಲ್. ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆರ್.ಜಿ. ನರಸಿಂಹಯ್ಯ, ಕೆ.ಕೆ.ಮಂಜುನಾಥ್, ಮುಖಂಡರಾದ ಪೂಲು ಶಿವಾರೆಡ್ಡಿ, ಡಾಕ್ಟರ್ . ಚಂದ್ರಕಲಾ, ಟಿ. ನಾರಾಯಣಸ್ವಾಮಿ, ಅಂಬೇಡ್ಕರ್ ಪಾಳ್ಯದ ಸಿ.ರವಿ, ಶ್ರೀನಾಥ್ ,ಮನು, ಗಾಂಡಹಳ್ಳಿ ಚಲಪತಿ, ಉಪ್ಪರಪಲ್ಲಿ ತಿಮ್ಮಯ್ಯ,ಗೂರವಿಕಲಹಳ್ಳಿ ಶ್ರೀನಿವಾಸ್, ಪೆದ್ದಪಲ್ಲಿ ಈರಪ್ಪ, ಕುಮ್ಮಕುಂಟೆ ಮಂಜುನಾಥ್, ಸದಾಶಿವ, ಚಲ್ದಿಗಾನಹಳ್ಳಿ ಮುನಿವಂಟಪ್ಪ, ಬಂದಾರ್ಲಪ್ಪಲಿ ಮುನಿಯಪ್ಪ, ಶ್ರೀ ನಿವಾಸಸ್, ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.