

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾಸ್ ಪಿ ಯು ಕಾಲೇಜಿನ ಪ್ರಥಮ ಪಿ ಯು ಸೈನ್ಸ್ ವಿದ್ಯಾರ್ಥಿಗಳಿಗೆ ಆವಿಷ್ಕಾರ -2025 ಕಾಲೇಜು ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು ಶಿಕ್ಷಣದೊಂದಿಗೆ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಸಂಸ್ಥೆಯು ನೂತನವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಮತ್ತು ಆಧುನಿಕತೆ ಹಾಗೂ ವ್ಯವಾಹಾರಿಕ ಜ್ಞಾನವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವ ಉದ್ದೇಶವೇ ಆವಿಷ್ಕಾರ -2025.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರೋಷನ್ ಬಿಬಿ (ಉಪಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜು ಹಾಲಾಡಿ ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಇತರರಿಗೆ ಮಾದರಿಯಾಗಬೇಕು ಈ ದಿಶೇಯತ್ತ ಬುನಾದಿ ತರಬೇತಿಯನ್ನು ನೀಡಿ ಹೊಸ ರೀತಿಯಲ್ಲಿ ಪ್ರತಿಭೆಗಳನ್ನು ಒಟ್ಟುಗೂಡಿಸುವ ಕ್ರಿಯೆಯೆ ಆವಿಷ್ಕಾರ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಗುರುತರ ಕಾರ್ಯವನ್ನು ಮಾಡುತ್ತಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ
ಈಗಾಗಲೇ ಹತ್ತು ಹಲವು ಪಾಟೇತರ ಚಟುವಟಿಕೆಯಿಂದ ಮನೆಮಾತಾಗಿರುವ ಸಂಸ್ಥೆಯ ಹೆಸರು ಇನ್ನೂ ಎತ್ತರಕ್ಕೆ ಕೊಂಡೋಯ್ಯಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು
ಮುಖ್ಯ ಅತಿಥಿಗಳಾದ ಶ್ರೀ ಚಂದ್ರ ಕುಲಾಲ್ ( ಮುಖ್ಯಶಿಕ್ಷಕರು ಸರಕಾರಿ ಪ್ರೌಢಶಾಲೆ,ಸಿದ್ದಾಪುರ ) ವಿದ್ಯಾರ್ಥಿಗಳಿಗೆ ಇಂತಹ ಅನನ್ಯ ಪ್ರಕ್ರಿಯೆಯನ್ನು ಆರಂಭಿಸಿ ಕಲಿಕೆ ಹೊರೆಯಾಗದಂತೆ ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ಮಾಡುತ್ತಿರುವ ಆಡಳಿತಮಂಡಳಿಯ ಕಾರ್ಯ ಚಟುವಟಿಕೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಶ್ರೀಮತಿ ನಿರ್ಮಲಾ ಕುಮಾರಿ (ಸಿ ಇ ಟಿ, ಜೆಇಇ ಸಂಯೋಜಕರು)ಶ್ರೀ ವಿಕಿ
ವಾಸ್ವಾನ್ (ನೀಟ್ ಸಂಯೋಜಕರು) ಡಾ. ರವಿದಾಸ್ ಶೆಟ್ಟಿ, (ಮುಖ್ಯಶಿಕ್ಷಕರು) ಕುಮಾರಿ ಅಲಿಟಾ ಡೇಸಾ ( ಆಂಗ್ಲ ಭಾಷಾ ಉಪನ್ಯಾಸಕರು ಸೆಂಟ್ ಅಲೋಸಿಯಸ್ ಡೀಮಡ್ ಟು ಬಿ ಯೂನಿವರ್ಸಿಟಿ, ಮಂಗಳೂರು ) ನಿರ್ಣಾಯಕರಾಗಿ
ಕಾರ್ಯನಿರ್ವಹಿಸಿದರು
ಆವಿಷ್ಕಾರ -2025 ರ ನೂತನ ಕಾರ್ಯಕ್ರಮದಲ್ಲಿ ಏಳು ತಂಡಗಳು ಕ್ರಮವಾಗಿ
1.ವಿನಸ್
2.ಮಾರ್ಸ್
3.ಜುಫಿಟರ್
4.ಸಾಟರ್ನ್
5.ಯುರಾನಸ್
6.ನೆಪಚುನ್
7.ಮರ್ಕ್ಯುರಿ
ಭಾಗವಹಿಸಿ ಹತ್ತು ಹಲವು ವಿವಿಧ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು
ಆಡಳಿತ ಮಂಡಳಿಯ ಅಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಉಪನ್ಯಾಸಕರು, ಶಿಕ್ಷಕರು, ಪ್ರಾಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು
ಮಿನುಗುತ್ತಿರುವ ಚಾಂಪಿಯನ್ ಟ್ರೋಫಿ ಯುರಾನಸ್ ತಂಡ ಸ್ವೀಕರಿಸಿತು , ರನ್ನರ್ಸ್ ಅಪ್ “ಮರ್ಕ್ಯುರಿ” ತಂಡದ ಮುಡಿಗೇರಿತು ಇತ್ತಂಡಗಳು ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು
ಉಪನ್ಯಾಸಕರಾದ ಶಾಂತಿ, ಉದಯ್ ಮತ್ತು ಮಂಜುನಾಥ್ ತಾಂತ್ರಿಕ ಸಲಹೆಗಾರರಾಗಿ ಸಹಕರಿಸಿದರು
ಉಪನ್ಯಾಸಕರಾದ ಉದಯ್ ಸ್ವಾಗತಿಸಿ, ವೈಶಾಲಿ ವಂದಿಸಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.









