

ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ. ಚುನಾಯಿತರಾದ ಪದಾಧಿಕಾರಿಗಳು, ಸದ್ರಿ ಸಂಘಟನೆಯ ಪೋಷಕರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾಪೀಟರ್ ಪಾವ್ಲ್
ಸಲ್ಪನ್ಹಾರವರನ್ನು ದಿನಾಂಕ 29/5/2025 ರಂದು ಭೇಟಿ ಮಾಡಿ ಸದ್ರಿ ವರ್ಷದ ವಾರ್ಷಿಕ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಬಳಿಕ ವಿಗಾರ್ ಜೆರಾಲ್ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೋನ್ಹಾ, ಕಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂ। ಡಾ।ಜೆ.ಬಿ.ಸಲ್ಜಾನ್ಹಾ, ಚಾನ್ಸಲರ್. ವಂ। ಫಾ। ವಿಕ್ಟರ್ ಡಿಸೋಜಾ, ಪ್ರೊಕ್ಕೂರೇಟರ್ ವಂ। ಫಾ। ಜಗದೀಶ್ ಪಿಂಟೊ, ಎಸ್ಟೇಟ್ ಮೇನೇಜರ್ ವಂ। ಫಾ। ಮ್ಯಾಕ್ಟಿಮ್ ರೊಸಾರಿಯೋ ಮತ್ತು ರಾಕ್ಣೊ ಸಂಪಾದಕರಾಗಿರುವ ವಂ। ಫಾ। ರೂಪೇಶ್ ಮಾಡ್ತಾ ಇವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು ಹಾಗೂ ಮುಂದಿನ ಯೋಜನೆಗಳಿಗೆ ಸಹಕಾರ ಕೇಳಿದರು. ಇವರೆಲ್ಲರೂ ತಮ್ಮ ಆಶೀರ್ವಾದವನ್ನು ನೀಡಿ ಕಳೆದ 46 ವರ್ಷಗಳಿಂದ ಸೇವೆಯ ಕೆಲಸಗಳನ್ನು ಮಾಡುತ್ತಾ ಬಂದಿರುವಿರಿ” ಎಂದು ಹಾರೈಸಿ ಮುಂದಿನ ಯೋಜನೆಗಳಿಗೆ ಶುಭ ಕೋರಿದರು. ಹಾಗೂ ನಿಮ್ಮ ಮುಂದಾಳುತ್ತದಲ್ಲಿ ಕಥೊಲಿಕ್ ಸಭೆಯ ಕೀರ್ತಿ ಇನ್ನಷ್ಟು ಮೇಲ್ದರ್ಜೆಗೆ ಏರಲಿ ಎಂದು ಸಹಕಾರದ ಭರವಸೆಯನ್ನು ಕೊಟ್ಟರು.
ಉಪಸ್ಥಿತಿ:
ಆಧ್ಯಾತ್ಮಿಕ ನಿರ್ದೇಶಕರು: ವಂ।ಡಾ।ಜೆಬಿ.ಸಲ್ಲಾನ್ಹಾ, ಅಧ್ಯಕ್ಷರು: ಶ್ರೀ ಸಂತೋಷ್ ಡಿಸೋಜಾ, ಬಜ್ಪೆ, ಉಪಾಧ್ಯಕ್ಷರು-1: ಶ್ರೀ ಲಾರೆನ್ಸ್ ಡಿಸೋಜಾ, ಸುರತ್ಕಲ್, ಉಪಾಧ್ಯಕ್ಷರು-2: ಶ್ರೀ ಲಿಯೋ ರೊಡ್ರಿಗಸ್, ಮಡಂತ್ಯಾರು, ಪ್ರಧಾನ ಕಾರ್ಯದರ್ಶಿ: ಶ್ರೀಮತಿ ವಿಲ್ಮಾ ಮೊಂತೇರೊ, ದೆರೆಬೈಲ್, ಸಹ ಕಾರ್ಯದರ್ಶಿ: ಶ್ರೀ ಓಲ್ವಿನ್ ರೊಡ್ರಿಗಸ್, ಆಲಂಗಾರು, ಖಜಾಂಜಿ: ಶ್ರೀ ಫಾನ್ಸಿಸ್ ಮೊಂತೇರೊ, ಮರಿಯಾಶ್ರಮ್, ತಲಪಾಡಿ., ಸಹಖಜಾಂಚಿ: ಶ್ರೀಮತಿ ಲವೀನಾ ಗ್ರೆಟ್ಟಾ ಡಿಸೋಜಾ, ನಿಕಟ ಪೂರ್ವ ಅಧ್ಯಕ್ಷರು: ಓಲ್ವಿನ್ ಡಿಸೋಜಾ, ಪಾನೀರ್.







