ನಕಲಿ ಬಯೋ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ-ಕ್ರಿಮಿನಲ್ ಮೊಕದಮ್ಮೆ

ಮುಳಬಾಗಿಲು-ಸೆ-02: ನಕಲಿ ಬಯೋ ಔಷಧಿಗಳನ್ನು ಮಾರಾಟ ಮಾಡಿ ರೈತರನ್ನು ವಂಚನೆ ಮಾಡುತ್ತಿದ್ದು, ರಘು ಆಗ್ರೋ ಟ್ರೇಡರ್ಸ್ ಅಂಗಡಿ ಮೇಲೆ ಕೃಷಿ ಜಂಟಿ ನಿರ್ದೇಶಕರಾದ ರೂಪಾದೇವಿ ಹಾಗೂ ತಾಲ್ಲೂಕು ಕೃಷಿ ಅಧಿಕಾರಿ ರವಿ ರವರ ನೇತೃತ್ವದಲ್ಲಿ 26-08-2022 ರಂದು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಔಷಧಿಯನ್ನು ವಶಪಡಿಸಿಕೊಂಡು ಮಾಲೀಕರಾದ ರಘುನಾಥರೆಡ್ಡಿ ವಿರುದ್ದ ನಂಗಲಿಠಾಣೆಯಲ್ಲಿ ಕ್ರಿಮಿನಲ್ ಮೊಕದಮ್ಮೆ ದಾಖಲೆ ಮಾಡಿದರು.ರೈತ ಸಂಘದ ದೂರಿನ ಆಧಾರದ ಮೇಲೆ ಕೃಷಿ ಅಧಿಕಾರಿಗಳು ಮುಳಬಾಗಿಲು ತಾಲ್ಲೂಕು ಬೈರಕೂರು ಹೋಬಳಿ ಹೆಚ್.ಬಯ್ಯಪ್ಪನಹಳ್ಳಿ ಗಡಿ ಭಾಗದಲ್ಲಿ ರಘು ಆಗ್ರೋಟೇಡರ್ಸ್ಮಾಲೀಕರಾದ ರಘುನಾಥರೆಡ್ಡಿ ರವರು ನಕಲಿ ಬಯೋ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮುಖಾಂತರ ರೈತರನ್ನು ವಂಚನೆ ಮಾಡುವ ಜೊತೆಗೆ ಸರ್ಕಾರದ ಆದಾಯಕ್ಕೆ ಮತ್ತು ಕೃಷಿ ಅಧಿಕಾರಿಗಳ ದಿಕ್ಕು ತಪ್ಪಿಸಿ ಔಷಧಿಗಳ ಮಾರಾಟದ ಹೆಸರಿನಲ್ಲಿ ನಕಲಿ ರಸಗೊಬ್ಬರಗಳನ್ನು ಪರವಾನಿಗೆ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿತು.

ಅಂಗಡಿ ಮೇಲೆ ದಾಳಿ ಮಾಡಿ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳುವಾಗ ಅಧಿಕಾರಿಗಳ ಮೇಲೆ ಪ್ರಭಾವಿ ಬಿ.ಜೆ.ಪಿ ಮುಖಂಡರು ಒತ್ತಡ ಹಾಕಿ ಯಾವುದೇ ಕಾರಣಕ್ಕೂ ಅಂಗಡಿ ಸೀಜ್ ಮಾಡಬೇಡಿ ಹಾಗೂ ಮಾಲೀಕರ ವಿರುದ್ದ ಕೇಸು ದಾಖಲು ಮಾಡದಂತೆ ಬೆದರಿಕೆ ಕೆರೆಗಳು ಸಹ ಬಂದಿದ್ದವು ಯಾವುದಕ್ಕೂ ಕೇರೆ ಮಾಡದ ಅಧಿಕಾರಿಗಳು ರೈತರ ಹಿತದೃಷ್ಟಿಯಿಂದ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿ ನಕಲಿ ಔಷಧಿ ಮಾರಾಟ ಮಾಡುವ ದಂದೆಕೋರರ ಬೆನ್ನು ಮೂಳೆ ಮುರಿಯುವ ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ 5 ವರ್ಷಗಳಿಂದ ಜಿಲ್ಲೆಯ ಟೆಮೋಟೋ ಕ್ಯಾಪ್ಸಿಕಂ ಮತ್ತಿತರ ಬೆಳೆಗಳಿಗೆ ಬಾದಿಸುತ್ತಿರುವ ನುಸಿ ಊಜಿ, ಬೊಬ್ಬೆ ರೋಜ್, ಮುಂತಾದ ರೋಗಗಳಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡುವ ಔಷಧಿಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲವೆಂದು ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ ಹಿನ್ನಲೆಯಲ್ಲಿ ಇಂದು ನಕಲಿ ಔಷಧಿಗಳ ಮಾರಾಟ ದಂದೆಕೋರರ ವಿರುದ್ದ ದಾಳಿ ನಡೆಸಿರುವುದಕ್ಕೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಗಡಿಭಾಗದ ರಘು ಟ್ರೇಡರ್ಸ್ ಮಾಲೀಕರು ಆಂಧ್ರ ಮೂಲಕದ ಬಯೋ ಅಔಷದಿಗಳನ್ನು ರಾತ್ರಿವೇಳೆ ಅಕ್ರಮವಾಗಿ ದಾಸ್ತಾನು ಮಾಡಿ ಯಾವುದೇ ಬಿಲ್ಲನ್ನು ರೈತರಿಗೆ ಔಷಧಿ ಖರೀದಿ ಮಾಡುವಾಗ ನೀಡದೆ ವಂಚನೆ ಮಾಡುವ ಜೊತೆಗೆ ರಸಗೊಬ್ಬರ ಹಾಗೂ ಡ್ರಿಪ್ ಗೊಬ್ಬರಗಳನ್ನು ನಕಲಿ ಮಾರಾಟ ಮಾಡುತ್ತಿದ್ದಾರೆ.ಇವರು ಈ ದಂದೆ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ನಡೆಯುತ್ತದೆ. ಏಕೆಂದರೆ ಅಧಿಕಾರಿಗಳು ತಮ್ಮ ಸರ್ಕಾರಿ ಕೆಲಸ ಮುಗಿದ ನಂತರ ಇವರ ದಂದೆಗೆ ಯಾರು ಅಡ್ಡಿ ಇಲ್ಲವೆಂದು ಮಾರಾಟ ಮಾಡುವ ಇವರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಬೇಕೆಂದು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದರು. ತಾಲ್ಲೂಕು ಕೃಷಿ ಅಧಿಕಾರಿ ರವಿಕುಮಾರ್ ಮಾತನಾಡಿ ಅಂಗಡಿ ಮಾಲೀಕರು ಯಾವುದೇ ಸ್ಟಾಕ್ ಪುಸ್ತಕ ಹಾಗೂ ರೈತರಿಗೆ ನಿಡಿರುವ ರಸೀದಿ ಬುಕ್ ಇಲ್ಲ ಜೊತೆಗೆ ನಕಲಿ ಜಿ.2 ಪಾರಂ ಹೆಸರಿನಲ್ಲಿ ರೈತರನ್ನು ವಂಚನೆ ಮಾಡುತ್ತಿದ್ದಾರೆ. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ತಾಲ್ಲೂಕಿನಾದ್ಯಂತ ನಕಲಿ ಔಷಧಿ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಈ ಪ್ರಕರಣ ಎಚ್ಚೆತ್ತುಕೊಳ್ಳಲು ಅವಕಾಶವೆಂದು ಎಚ್ಚರಿಕೆ ನೀಡಿದರು. ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಭವ್ಯ ರವರು ರೈತ ಸಂಘದ ಮುಖಂಡರಾದ ಮಂಜುನಾಥ, ಶ್ರೀನಿವಾಸ, ಆಂಜಿನಪ್ಪ, ಆನಂದರೆಡ್ಡಿಯಲವಳ್ಳಿ ಪ್ರಭಾಕರ್, ಹತ್ತಾರು ರೈತರು ಹಾಜರಿದ್ದರು.