ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಹೆಣ್ಣು ಮಗಳ ಮೇಲೆ ಹಲ್ಲೆ : ಆರೋಪಿಗಳನ್ನು ಗಡಿಪಾರು ಮಾಡಲು ದಲಿತ ಸಂಘರ್ಷ ಸಮಿತಿ-ಕರ್ನಾಟಕ ಒತ್ತಾಯ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ ಸೆಪ್ಟೆಂಬರ್ 9 : ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ, ಅವರನ್ನು ಗಡಿ ಪಾರು ಮಾಡಿ, ದಲಿತ ಹೆಣ್ಣುಮಕ್ಕಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ದಲಿತ ಸಂಘರ್ಷ ಸಮಿತಿಯ-ಕರ್ನಾಟಕ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಸೆಪ್ಟೆಂಬರ್ 9ರಂದು ಬೆಳಿಗ್ಗೆ 8:30ಕ್ಕೆ ಚಿಂತಾಮಣಿ ಕಾಲೇಜಿಗೆ ಬಸ್ಸಿನಲ್ಲಿ ಹೊರಟಿದ್ದ ಹೆಣ್ಣು ಮಕ್ಕಳನ್ನು 50 ಮಂದಿ ಸವರ್ಣೀಯರ ಯುವರ ಕುಂಪು ಲೈಂಗಿಕ ಕಿರುಕುಳ ನೀಡಿ, ಸರ್ಕಾರಿ ಕೆಎಸ್‍ಆರ್.ಟಿ.ಸಿಬಸ್ಸನ್ನು ಅಡ್ಡಗಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವುದು ಮಹಿಳಾ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಹೆಣ್ಣು ಮಕ್ಕಳ ಸಂಬಂಧಿಕರು ತಡೆಯಲು ಬಂದಾಗ ಅವರನ್ನು ದೊಣ್ಣೆ, ರಾಡು, ಮೊಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿಯ-ಕರ್ನಾಟಕ(ರಿ) (ಆSSಏ)ನ ರಾಜ್ಯಾಧ್ಯಕ್ಷ ಅಣ್ಣಯ್ಯ ಮಂಜುನಾಥ್ ನೇತೃತ್ವದ ಕೋಲಾರ ಜಿಲ್ಲಾ ಮಹಿಳಾ ಸಂಚಾಲಕಿ ಲಕ್ಷ್ಮಿ.ಪಿ ತೀವ್ರವಾಗಿ ಖಂಡಿಸಿದ್ದಾರೆ.
ಯಾರೆ ಹೆಣ್ಣು ಮಗಳನ್ನು ಕೈಯಿಂದ ಹೊಡೆಯುವಂತಿಲ್ಲ. ಸಂವಿಧಾನ ಬಾಹಿರವಾಗಿದೆ. ಇಂತಹ ಕೃತ್ಯ ವೆಸಗಿರುವವರ ಮೇಲೆ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಂಡು, ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಕೇಸುಗಳನ್ನು ದಾಖಲಿಸಬೇಕು. ಮನೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ವಿಚಾರವಾಗಿ ನ್ಯಾಯಾಂಗ ತನಿಖೆ ಮಾಡಿ ಅವರನ್ನು ಗಡಿಪಾರು ಮಾಡಬೇಕು ಅಥವಾ ಜೀವಾವದಿ ಶಿಕ್ಷೆ ನೀಡಬೇಕು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಪರ ಇರುವ ಸಮಾಜ ಕಲ್ಯಾಣ ಇಲಾಖೆಯು ಜೀವಂತವಾಗಿ ಸತ್ತಂತಿದೆ ಹಾಗೂ ಇಡೀ ಸಮಾಜ ಕಲ್ಯಾಣ ಇಲಾಖೆಯು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ನಡೆದರೂ ಶ್ರೀನಿವಾಸಪುರ ಶಾಸಕ ಆರ್.ರಮೇಶ್‍ಕುಮಾರ್ ರವರು, ಜಿಲ್ಲೆಯ ಶಾಸಕರು ಹಾಗೂ ಸಂಸದ ಎಸ್.ಮುನಿಸ್ವಾಮಿಯವರು ಮಧ್ಯ ಪ್ರವೇಶ ಮಾಡದಿರುವುದು ಖಂಡನೀಯ. ಇನ್ನಾದರೂ ಮಧ್ಯ ಪ್ರವೇಶ ಮಾಡಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ದಲಿತ ಹೆಣ್ಣುಮಕ್ಕಳ ಸಂಬಂಧಿಕ ಗಾಯಾಳುಗಳಿಗೆ ಪ್ರತಿಯೊಬ್ಬರಿಗೂ 10 ಮತ್ತು 5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಘ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯು ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಹಿಳಾ ಸಂಚಾಲಕಿ ಲಕ್ಷ್ಮಿ.ಪಿ, ರಾಜ್ಯ ವಿಭಾಗೀಯ ಸಂಚಾಲಕಿ ಚಿಕ್ಕವಲಗಮಾದಿ ಲಕ್ಷ್ಮಮ್ಮ, ಮತ್ತಿಕುಂಟೆ ಕೃಷ್ಣ, ಕೋಲಾರದ ಜೈರಾಮ್, ನಾರಾಯಣಸ್ವಾಮಿ, ಹಾರೋಹಳ್ಳಿ ಮಾಲ, ಬಂಗಾರಪೇಟೆ ನಾಗರತ್ನಮ್ಮ, ಕೋಲಾರ ವರಲಕ್ಷ್ಮಿ, ಬಂಗಾರಪೇಟೆ ರಾಮಪ್ಪ, ಯಲ್ಲಪ್ಪ, ಕೆಜಿಎಫ್ ರಾಧಾಕೃಷ್ಣ, ವೆಂಕಟೇಶ್, ಉನ್ಕುಂದ ಅಮರೇಶ್ ಉಪಸ್ಥಿತರಿದ್ದರು.