ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಯುವ ಸಮುದಾದಯ ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಬೇಕು ಎಂದು ತಾಲ್ಲೂಕು ಡಾ. ಪುನೀತ್ ರಾಜ್‌ಕುಮಾರ್ ಬಳಗದ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಪುನೀತ್ ರಾಜ್‌ಕುಮಾರ್ ಅವರ ೪೭ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪುನೀತ್ ಅಪ್ರತಿಮ ಕಲಾವಿದರಷ್ಟೇ ಅಲ್ಲದೆ ಗುಪ್ತ ದಾನಿಯಾಗಿದ್ದರು. ಅವರ ಸಾಮಾಜಿಕ ಕಳಕಳಿ ಬಡವರ ಬದುಕಿಗೆ ಆಸರೆಯಾಗಿತ್ತು. ಅಕ್ಷರ ಕಲಿಕೆಗೆ ದಾರಿಯಾಗಿತ್ತು ಎಂದು ಹೇಳಿದರು.
ಪುನೀತ್ ರಾಜ್‌ಕುಮಾರ್ ಜನ್ಮದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಇನ್ಸ್ಪೆಕ್ಟ್ರ್ ಸಿ.ರವಿಕುಮಾರ್, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಕಂದಾಯ ನಿರೀಕ್ಷಕ ಶಂಕರ್, ನಾಗರಾಜ್, ರಾಜೇಶ್, ಅಭಿಮಾನಿ ಬಳಗದ ಮುಖಂಡರಾದ ಕಾರ್ತಿಕ್, ಮಂಜು, ಚೆಂದು, ನಾರಾಯಣಮೂರ್ತಿ, ಮುರಳಿ ಪ್ರೇಮ್‌ಕುಮಾರ್, ಪುರಸಭಾ ಸದಸ್ಯ ನಲ್ಲಪಲ್ಲಿ ರೆಡ್ಡಪ್ಪ ಇದ್ದರು.