

ಶ್ರೀನಿವಾಸಪುರ:ಪುರಸಭಾ ಕಚೇರಿಯ ಸಭಾಂಗಣದಲ್ಲಿಂದು ಪುರಸಭಾ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಜಿಲ್ಲಾ ವಿಪತ್ತು ಉಪಶಮನ ನಿಧಿಯಡಿ ಪುರಸಭೆಗೆ ಹಂಚಿಕೆಯಾಗಿರುವ ರೂ.50.00 ಲಕ್ಷಗಳ ಅನುದಾನಕ್ಕೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಅನುದಾನದಡಿ ಸ್ವೀಕೃತಗೊಂಡ ಏಕಮಾತ್ರ ಟೆಂಡರ್ ಗಳನ್ನು ಸಭೆಯಲ್ಲಿ ಅನುಮೋದಿಸಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆಯ ನೂತನ ನಾಮನಿರ್ದೇಶನ ಸದಸ್ಯರಾದ ಗಂಗಾಧರ್, ಶಫೀವುಲ್ಲಾ, ನರಸಿಂಹಮೂರ್ತಿ, ಹೇಮಂತ್ ಕುಮಾರ್, ಶಿವರಾಜ್ ರವರುಗಳನ್ನು ಸ್ವಾಗತಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಕೆ.ಎಸ್.ಸುನೀತಾ, ಮುಖ್ಯಾಧಿಕಾರಿ ವಿ. ನಾಗರಾಜು, ಕಚೇರಿ ವ್ಯವಸ್ಥಾಪಕರಾದ ಜಿ. ನವೀನ್ ಚಂದ್ರ, ಪುರಸಭಾ ಸದಸ್ಯರು ಹಾಗೂ ಕಚೇರಿ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

