JANANUDI.COM NETWORK

ಕುಂದಾಪುರ, ಜೂ. 23: ಜನನುದಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಏರ್ಪಡಿಸಿದ ಮುದ್ದು ಯೇಸು ಫೋಟೊ ಸ್ಫರ್ಧೆಯ ವಿಜೇತರಿಗೆ ಕೋಟೆಶ್ವರ ಕಟ್ಕರೆಯ ಬಾಲ ಯೇಸುವಿನ ಆಶ್ರಮದಲ್ಲಿ ಗುರುವಾರದಂದು ಬಾಲ ಯೇಸುವಿನ ನೊವೆನಾ ದಿವಸ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಜೊತೆಗೆ ಕಟ್ಕರೆ ಬಾಲ ಯೇಸುವಿನ ಮುಖ್ಯಸ್ಥರಾದ ಧರ್ಮಗುರು ವಂ|ಆಲ್ವಿನ್ ಸಿಕ್ವೇರಾ ಪ್ರಶಸ್ತಿ ಪತ್ರ ವಿತರಿಸಿ ಶುಭ ಕೋರಿದರು.ಈ ಸ್ಪರ್ಧೆಯ ತಿರ್ಪುದಾರರರಲ್ಲಿ ಒರ್ವರಾದ ಕಟ್ಕೆರೆ ಬಾಲ ಯೇಸು ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್. ಸ್ಫರ್ಧೆಯ ಮುಖ್ಯ ಪೋಷಕರಾದ ವಸಂತ ಬೇಕರಿಯ ಮಾಲಕರಾದ ಶ್ರೀಶನ್ ಬಹುಮಾನ ವಿತರಣೆಯಲ್ಲಿ ಸಹಕರಿಸಿದರು
ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಸ್ಫರ್ಧೆಯ ಸಂಯೋಜಕಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವು ಆಲ್ರಿನಾ ಡಿಸೋಜಾ, ಪಿಯುಸ್ ನಗರ. ಜೇವಿನ್ ಮೆಂಡೊನ್ಸಾ, ಬಸ್ರೂರು, ದ್ವೀತಿಯ ಸ್ಥಾನ ಮತ್ತು ಅಲೈನಾ ಅಬ್ರಿಲ್ಲೆ ಫೆನಾರ್ಂಡಿಸ್,ಕುಂದಾಪುರ ತ್ರತೀಯ ಸ್ಥಾನ ಲಭಿಸಿದರೆ, ಒಂದರಿಂದ ಐದು ವರ್ಷಗಳ ಮಕ್ಕಳ ವಿಭಾಗದಲ್ಲಿ ಆ್ಯನ್ ಕಾರ್ಡೋಜಾ, ಮೂಡುಬಿದ್ರೆ ಇವರು ಪ್ರಥಮ ಸ್ಥಾನ ಲಭಿಸಿದರೆ, ಸಾನೀಯಾ ಡಿಮೆಲ್ಲೊ, ಕುಂದಾಪುರ ದ್ವೀತಿಯ ಸ್ಥಾನ ಮತ್ತು ಮಾಹಿಮಾ ವಿಯಾನ್ನಾ ಬರೆಟ್ಟೊ ಇವಳಿಗೆ ತ್ರತೀಯ ಸ್ಥಾನ ಲಭಿಸಿತು,
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕ್ಲೇರ್ ಬರೆಟ್ಟೊ, ಕುಂದಾಪುರ, ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು, ಸಾಮ್ಜುನ್ ಡಿಸಿಲ್ವಾ ಕುಂಟಾಲ್ ಪಾಡಿ, ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಕಾರೆನ್ ಡಿ’ಲಿಮಾ, ಬಜ್ಪೆ, ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ, ಇಥನ್ ಅಬ್ನೆರ್ ಡಿಸೋಜಾ, ದೇರಲಕಟ್ಟೆ ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದರು. ತೀರ್ಪುಗಾರರಾಗಿ ಧರ್ಮಗುರು ವಂ|ರೋಹನ್ ಡಿಆಲ್ಮೇಡಾ, ಸೈಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ,ಪ್ರಾಂಶುಪಾಲರು,ಬೆಂಗಳೂರು, ಸಿಸ್ಟರ್ ತೆರೆಜಾ ಶಾಂತಿ, ಮುಖ್ಯೋಪಾಧ್ಯಾಯಿನಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಜೋಸೆಫ್ ಫೆನಾರ್ಂಡಿಸ್, ನಾಟಕ ನಿರ್ದೇಶಕರು, ಬೈಂದೂರು ಇವರು ಸಹಕರಿಸಿದ್ದರು.










































ಸ್ಫರ್ಧಾ ಪೋಷಕರು







