73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್.ಎಸ್.ಎಸ್. ತಂಡದಿಂದ ಕುಂದಾಪುರದ ವೇನಿಶಾ ಡಿಸೋಜಾ ಭಾಗಿ – At the 73rd Republic Day Parade Venisha D’Souza of Kundapur participated from NSS Division

JANANUDI.COM NETWORK


ಕುಂದಾಪುರ, ಜ.26: ರಾಜ್ ಪಥ್ ನಲ್ಲಿ ನಡೆಯುವ ಭಾರತದ 73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್.ಎಸ್.ಎಸ್. ವಿಭಾಗದಿಂದ ಕುಂದಾಪುರದ ವೇನಿಶಾ ಡಿಸೋಜಾ ಭಾಗಿಯಾದರು, ಅವರ ಜೊತೆ ಕರ್ನಾಟಕದ ವಿವಿಧ ಕಾಲೇಜುಗಳಿಂದ ಆರಿಸಿ ಬಂದ ಒಟ್ಟು 10 ಮಂದಿ ಎನ್.ಎಸ್.ಎಸ್. ಸದಸ್ಯರು ಭಾಗಿಯಾದರು.
ವೇನಿಶಾ ಅನ್ನಾ ಡಿಸೋಜಾ, ಕುಂದಾಪುರದ ವಿನ್ಸೆಂಟ್ ಡಿಸೋಜಾ ಮತ್ತು ಮರಿಯಾ ಡಿಸೋಜಾಳ ಪುತ್ರಿಯಾಗಿದ್ದು, ವೇನಿಶಾ ಹೊನ್ನಾವರದ ಸೈಂಟ್ ಇಗ್ನೆಷಿಯಸ್ ಇನ್ಸುಟ್ಯೂಟ್ ಆಫ್ ಹೇಲ್ತ್ ಎಂಡ್ ಸಾಯನ್ಸ್ ವಿದ್ಯಾ ಕೇಂದ್ರದಲ್ಲಿ ಬಿ ಎಸ್ ಸಿ ನರ್ಸಿಂಗ್ 3 ನೇ ವರ್ಷದ ವಿದ್ಯಾರ್ಥಿಯಾಗಿದ್ದು, ರಾಷ್ಟ್ರೀಯ ಎನ್.ಎಸ್.ಎಸ್. ವಿಭಾಗದಿಂದ ಆರಿಸಿ ಬಂದು ದೆಹಲಿಯಲ್ಲಿ ಪಥ ಸಂಚಲನಕ್ಕಾಗಿ ತರಬೇತಿ ಪಡೆಯುತಿದ್ದಳು.
ವೇನಿಶಾಳ ಜೊತೆ ವಿವಿಧ ಕಾಲೇಜುಗಳಿಂದ ಆರಿಸಿ ಬಂದ ಒಟ್ಟು 10 ಮಂದಿ ಎನ್.ಎಸ್.ಎಸ್. ಸದಸ್ಯರಲ್ಲಿ 5 ಮಂದಿ ಬಾಲಕಿಯರು ಮತ್ತು 5 ಮಂದಿ ಬಾಲಕರಾಗಿದ್ದರು.
ವೇನಿಶಾ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಂತ ಮೇರಿಸ್ ಪಿ.ಯು. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾಳೆ.

At the 73rd Republic Day Parade Venisha D’Souza of Kundapur, participated from NSS Division

Kundapur: J.26: On India’s 73rd Republic Day Parade at the Rajpath , Venisha D’Souza of Kundapur participated from NSS Division, with a total of 10 students from various colleges in Karnataka participating in the Parade.
Venisha Anna D’Souza, daughter of Vincent D’Souza of Kundapur and Maria D’Souza, is a 3rd year student of BSc Nursing at Saint Ignatius Institute of Health and Science Education Center, Honnavar. She was selected from the National NSS division and was training for Republic Day Parade in Delhi.
A total of 10 Students from various colleges across Karnataka along with Venisha were selected from NSS. Among them 5 of the members were girls and 5 were boys.
Venisha is the Alumna (Old Student) of Holy Rosary English Medium School and Saint Mary’s P.U. College Kundapur.