ಶ್ರೀನಿವಾಸಪುರ : ತಹಶೀಲ್ದಾರ್ ಕಛೇರಿ ಕಟ್ಟಡ ಮೇಲ್ಬಾಗದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡಲು ಇಂಜಿನೀಯರ್ಗಳೊಂದಿಗೆ ಚರ್ಚೆ ಮಾಡಿದರು. ಅಲ್ಲದೆ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ವಾಹನಗಳ ಪಾರ್ಕಿಂಗ್ ನ್ನ ಸುಜಜ್ಜಿತವಾಗಿ ವ್ಯವಸ್ಥೆಯನ್ನ ಮಾಡುವಂತೆ ಪೊಲೀಸ್ ನಿರೀಕ್ಷ ಎಂ.ಬಿ.ಗೊರವಿನಕೊಳ್ಳ ರವರಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಗೆ ಮಂಗಳವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳಲ್ಲಿನ ಪ್ರಗತಿಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಮುಗಿದ ನಂತರ ಕಛೇರಿಯಿಂದ ಹೊರಬರುವವೇಳೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಬಳಿ ಅರ್ಜಿಗಳನ್ನು ನೀಡಲು ಹೋದ ಸಮಯದಲ್ಲಿ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಲಿಲ್ಲವೆಂದು ಕೆಲ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ನೋಟ್ 1 : ನಾವು ತಾಲೂಕು ಹಾಗು ಪಟ್ಟಣದ ಅಭಿವೃದ್ಧಿಗಳ ಬಗ್ಗೆ ಅರ್ಜಿಯನ್ನ ನೀಡಲು ಬಂದ ಸಮಯದಲ್ಲಿ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗಳ ಬಗ್ಗೆ ಆಲಿಸದೆ ಹೊರಟುಹೋಗಿರುವುದು ಬೇಸರ ತಂದಿದ್ದು, ನಾವು ತಾಲೂಕಿನಲ್ಲಿ ಅಧಿಕಾರಿಗಳು ನಮ್ಮ ಕೆಲಸ ಮಾಡಲಿಲ್ಲವೆಂದು ಹಿರಿಯ ಅಧಿಕಾರಿಗಳ ನಮ್ಮ ಸಮಸ್ಯೆ ಹೇಳಲು ಬಂದಾಗ ಅವರು ನಮ್ಮ ಸಮಸ್ಯೆಯನ್ನು ಆಲಿಸದಿದ್ದರೆ ನಮ್ಮ ಸಮಸ್ಯೆ ಬಗ್ಗೆ ಯಾರ ಬಳಿ ಹೇಳುವುದು ಎಂದು ತಮ್ಮ ಬೇಸರ ಮಾತನ್ನ ಪತ್ರಿಕೆಯೊಂದಿಗೆ ಹಂಚಿಕೊಂಡರು.
ಜಗದೀಶ್ . ಆಟೋಚಾಲಕರ ಸಂಘದ ಅಧ್ಯಕ್ಷ. ಶ್ರೀನಿವಾಸಪುರ.
ನೋಟ್ 2 : ತಹಶೀಲ್ದಾರ್ ಕಛೇರಿಯಲ್ಲಿ ವಿವಿಧ ಇಲಾಖೆಗಳ ಕಛೇರಿಗಳು ಇದ್ದು, ಅವುಗಳಲ್ಲಿ ಸಾರ್ವಜನಿಕರ ಕೆಲಸ, ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ ಹಾಗು ಸರ್ಕಾರರಿಂದ ಸಂದ್ಯಾಸುರಕ್ಷ , ವಿದವಾ ವೇತನ ಹಾಗೂ ಅಂಗವಿಕಲರ ವೇತನ ಬರುತ್ತಿಲ್ಲವಾದ್ದರಿಂದ ಅವರು ನಾಲ್ಕೈದು ತಿಂಗಳುಕಾಲ ಕಛೇರಿಗೆ ಅಳಿಯುವ ಪರಿಸ್ಥಿತಿ ಉಂಟಾಗಿದೆ , ರೇಷನ್ ಬರುತ್ತಿಲ್ಲ, ಸರ್ವೆ ಇಲಾಖೆಗಳಲ್ಲಿ ಬೇಕಾದಷ್ಟು ಕೆಲಸಗಳು ಇವೆ. ಸಂಬಂದಪಟ್ಟ ಇಲಾಖಾಧಿಕಾರಿ ವಿವಿದ ಕಾರಣಗಳು ಹೇಳಿ ಕಛೇರಿಯಲ್ಲಿ ಅಧಿಕಾರಿಗಳು ಇರುವುದಿಲ್ಲ ಎಂದು ಆರೋಪಿಸಿ, ಸಾರ್ವಜನಿಕವಾಗಿ ವಿವಿಧ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಪಿ.ಆರ್.ಸೂರ್ಯನಾರಾಯಣ. ರಾಜ್ಯ ಉಪಾಧ್ಯಕ್ಷ . ಕರ್ನಾಟಕ ಪ್ರಾಂತ ರೈತ ಸಂಘ.
ನೋಟ್ 3 : ತಮ್ಮ ಜಮೀನನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತಹಶೀಲ್ದಾರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದೆ, ತಹಶೀಲ್ದಾರ್ ರವರು ನನ್ನ ಸಮಸ್ಯೆಗೆ ಸ್ಪಂದನೆ ನೀಡಿದರು. ಕಛೇರಿ ಸಿಬ್ಬಂದಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ, ಆರ್ಆರ್ ರೋಂನಲ್ಲಿನ ಸಿಬ್ಬಂದಿಗಳು ಜನರಿಂದ ಹಣವನ್ನು ಪೀಕುವುದೇ ಅವರ ಕೆಲಸ ಅಲ್ಲಿ ಕಾರ್ಯನಿರ್ವಹಿಸುವವರು ಒಂದು ರೀತಿಯಾಗಿ ತಿಮಿಂಗಲಗಳಾಗಿ ಬೆಳೆದಿದ್ದು, ಈ ಸಮಸ್ಯೆಯನ್ನ ಜಿಲ್ಲಾಧಿಕಾರಿಗಳ ಬಳಿ ಹೇಳಿಕೊಳ್ಳಲು ಬಂದಿದ್ದೆ, ಆದರೆ ಜಿಲ್ಲಾಧಿಕಾರಿಗಳು ನನ್ನ ಸಮಸ್ಯೆಯನ್ನು ಆಲಿಸದೆ ಹೊರನಡೆದಿರುವುದು ಬೇಸರ ತಂದಿದೆ . ಇನ್ನ ಯಾರು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಕೇಳುವುದು ಎಂದು ತಮ್ಮ ಆಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.
ಗೆಂಗಿರೆಡ್ಡಿ. ವಕೀಲರು. ರೆಡ್ಡಿವಾರಿಪಲ್ಲಿ ಗ್ರಾಮ
ತಹಶೀಲ್ದಾರ್ ಜಿ.ಎನ್.ಸುದೀಂದ್ರ , ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್, ಪೊಲೀಸ್ ನಿರೀಕ್ಷ ಎಂ.ಬಿ.ಗೊರವನಕೊಳ್ಳ, ನಿರ್ಮಿತ ಕೇಂದ್ರ ಇಂಜಿನೀಯರ್ ರವಿ, ಶಿರಸ್ತೆದಾರ ಬಲರಾಮಚಂದ್ರೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೈರೆಡ್ಡಿ, ಪಿಡಬ್ಲ್ಯುಡಿ ಇಲಾಖೆ ಇಂಜಿನೀಯರ್ ನಾರಾಯಣಸ್ವಾಮಿ, ಆರ್ಐ ಗಳಾದ ಗುರುರಾಜರಾವ್, ಮುನಿರೆಡ್ಡಿ, ಶಂಕರರೆಡ್ಡಿ ಇದ್ದರು.