ಕುಂದಾಪುರ,ಮಾ.೨೩: ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಮಾಜಿ ದಿವ್ಯ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ, ಪ್ರಸ್ತೂತ ಬೆಂಗಳೂರಿನಲ್ಲಿ ಕೆನೊನ್ ಲಾ ವ್ಯಾಸಂಗ ಮಾಡುತ್ತೀರುವ ವಂ| ಧರ್ಮಗುರು ಸ್ಟೀಪನ್ ಡಿಸೋಜಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.ನಂತರ ಅವರು ಚರ್ಚಿನಲ್ಲಿ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು ಅರ್ಪಿಸಿದರು. ಕಟ್ಕೆರೆ ಬಾಲಯೇಸು ಆಶ್ರಮದ ವಂ|ಧರ್ಮಗುರು ಜೋನ್ ಸಿಕ್ವೇರಾ “ಯೇಸು ಕ್ರಿಸ್ತರು ತನ್ನ ಜೀವಿತದ ಕೊನೆ ಗಳಿಗೆಯಲ್ಲಿ ಅನುಭವಿಸಿದ ಯಾತನೆಯಲ್ಲಿ ಹಲವರು ಪಾತ್ರಧಾರಿಗಳಾದರು,ಪರಾಧಿನತೆ, ಶಿಸ್ಯರ ಪಲಾಯನ, ನಿರಾಕರಣೆ, ಹಲವಾರು ಘಟನೆಗಳು ನಡೆದವು ಅಂತಹ ಪಾತ್ರಧಾರಿಗಳಲ್ಲಿ, ಪ್ರಸ್ತೂತ ನಾವೊಂದು ಅಂತ ಪಾತ್ರಧಾರಿಕೆಯನ್ನು ವಹಿಸಿದ್ದೇವೆಯೇ ಎಂಬುದು ಅರಿತುಕೊಳ್ಳಬೇಕು” ಎಂದು ಸಂದೇಶ ನೀಡಿದರು.
ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನ ಮತ್ತು ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನ ಮತ್ತು ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡು ವಂದಿಸಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು.