ಕುಂದಾಪುರ, ಜೂ.2: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 2 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪಾವ್ಲ್ ರೇಗೊ ಸಹಾಯಕ ಧರ್ಮಗುರು ವಂ|ಆಶ್ವಿನ್ ಆರಾನ್ನಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಇವರುಗಳು ದೀಪ ಬೆಳಗಿಸಿ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು.
ಈ ವೇಳೆ ಅ|ವಂ| ಪಾವ್ಲ್ ರೇಗೊ ‘ ಯೇಸು ಕ್ರಿಸ್ತರ ತ್ಯಾಗ ಜೀವಬಲಿದಾನದ ಮೊದಲು ಅವರು ತಮ್ಮ ಕೊನೆಯ ಭೋಜನ ವೇಳೆ ಇದು ನನ್ನ ದೇಹ ಇದು ನನ್ನ ರಕ್ತ ಎಂದು ಎಂದು ತಿಳಿಸಿ, ಇದು ನನ್ನ ನೆನಪಿಗೆ ಆಚರಿಸಿ, ಎಂದು ಹೇಳಿ ಅಂದು ಘಟಿಸಿದ ಆ ಸಂಸ್ಕಾರ ದಿನ, ಈಗ ನಾವೇನು ಇವತ್ತು ಹೇಳುತಿದ್ದೇವೊ ಅತ್ಯಂತ ಪವಿತ್ರ ದೇಹ ಮತ್ತು ಕ್ರಿಸ್ತನ ರಕ್ತದ ಘನತೆಯ ಹಬ್ಬ ಎಂದು ಆಚರಿಸುವ ಹಬ್ಬವಾಗಿದೆ, ನಾವು ಸ್ವೀಕರಿಸುವ ಪವಿತ್ರ ಪ್ರಸಾದವನ್ನು ನಾವು ಮೊದಲು ವಿಶ್ವಾಸಿಸಬೇಕು, ಸಂಭ್ರಮಿಸಬೇಕು, ಪಾಲಿಸಬೇಕು’ ಎಂದು ಸಂದೇಶ ನೀಡಿದರು.
ನಮ್ಮ ಮಕ್ಕಳಿಗೆ ಕ್ರೈಸ್ತ ಶಿಕ್ಷಣದ ಅಗತ್ಯ ಇದೆ, ಕ್ರೈಸ್ತ ಶಿಕ್ಷಣ ಮೌಲ್ಯ ಭರಿತ ಜೀವನ ನಡೆಸಲು ಸಹಕಾರಿಯಾಗುತ್ತದೆ, ಹಲವಾರು ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರು ನಿಸ್ವಾರ್ಥ ಸೇವೆಯನ್ನು ನಿಮಗೆ ನೀಡುತ್ತಾರೆ, ಚೆನ್ನಾಗಿ ಕ್ರೈಸ್ತ ಶಿಕ್ಷಣ ಕಲಿತು, ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನ ತಿಳಿಸಿದರು.
ಈ ವೇಳೆ ಧರ್ಮಗುರುಗಳು ನೀತಿ ಪಾಠದ ಪುಸ್ತಕಗಳನ್ನು ಶಿಕ್ಷಕರಿಗೆ ಹಸ್ತಾಂತರಿಸಿದರು, ಮತ್ತು ನೀತಿ ಪಾಠದ ಸಲುವಾಗಿ ಒಂದು ಗಂಡು ಮಗು ಮತ್ತೊಂದು ಹೆಣ್ಣು ಮಗುವನ್ನು ಸಾಂಕೇತಿಕವಾಗಿ ಶಿಕ್ಷಕಿಯ ಕೈಗೆ ಒಪ್ಪಿಸಲಾಯಿತು. ನೀತಿ ಶಿಕ್ಷಣ ನೀಡುವ ಇಗರ್ಜಿಯ ಎಲ್ಲಾ ಶಿಕ್ಷಕಿಯರು ಹಾಗೂ ಭಕ್ತಾಧಿಗಳ ಜೊತೆ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಬಲಿದಾನದ ವೇಳೆ ಕ್ರಿಸ್ತ ಶಿಕ್ಷಣ ಶಿಕ್ಷಕ ಶಿಕ್ಷಕಿಯರು ಪ್ರತ್ನಿಜ್ನಾ ಸ್ವೀಕಾರ ಮಾಡಿದರು.ಮರಿಯಾ ಬರೆಟ್ಟೊ ಕಾರ್ಯಕ್ರಮ ನಿರ್ವಹಿಸಿದರು.