

ಶ್ರೀನಿವಾಸಪುರ : ನೀವು ಇದ್ದರೆ ಎಪಿಎಂಸಿ ಅಧಿಕಾರಿಗಳು ಹಾಗು ಏಜೆಂಟ್ಗಳು ಇಲ್ಲ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ನಾವು ಬಂದಿದ್ದೇವೆ ಎಂದು ಉಪ ಲೋಕಾಯುಕ್ತ ವೀರಪ್ಪ ರೈತರಿಗೆ ತಿಳಿಸಿದರು. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.
ಇದೇ ಸಮಯದಲ್ಲಿ ರೈತರಾದ ತಿನ್ನಲಿ ರಾಮಚಂದ್ರಾರೆಡ್ಡಿ, ದೇವರಾಜ್ ನಮ್ಮ ಬಳಿ ಕಮೀಷನ್ 10 ರೂ ಪಡೆಯುತ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಯ ಬಗ್ಗೆ ದೂರಿದರು. ರೈತ ದೇವರೆಡ್ಡಿಹಳ್ಳಿ ಮಾರಪ್ಪರೆಡ್ಡಿ ಮಾತನಾಡಿ ಅಮೀರ್ಜಾನ್ ಎಂಬುವವರಿಗೆ ಕೆಳದ ಮೂರು ವರ್ಷಗಳ ಹಿಂದೆ ಮಾವಿನ ಫಸಲುನ್ನು ನೀಡಿದ್ದು ಅದಕ್ಕೆ ಸಂಬಂದಿಸಿದಂತೆ 70 ಸಾವಿರ ಮಾತ್ರ ನೀಡಿ ಉಳಿದ 3ಲಕ್ಷರೂ ಕೊಡಬೇಕು ಆದರೆ ಇದುವರೆಗೂ ನೀಡಿಲ್ಲ ಎಂದು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿರವರಿಗೆ ಅಮೀರ್ಜಾನ್ರವರನ್ನು ಕರಿಸಿ ಮಾರಪ್ಪರೆಡ್ಡಿ ಎಂಬುವವರ ಬಾಕಿ ಹಣವನ್ನು ಹಿಂದುರುಗಿಸುವಂತೆ ಸೂಚಿಸಿ ಇಲ್ಲವಾದಲ್ಲಿ ಅತನ ಲೈಸನ್ಸ್ನ್ನು ಕಾನ್ಸ್ಲ್ ಮಾಡಿ ಎಂದು ತಿಳಿಸಿದರು.
ಇಲ್ಲಿ ತೂಕದ ಮಿಷನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಆವರಣದಲ್ಲಿ ನೀರಿನ ಸಮಸ್ಯೆ, ಮಳೆ ಬಂದರೆ ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ನಿಲ್ಲತ್ತದೆ ಇದರಿಂದಾಗಿ ಮೂಗ ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆವರಣದಲ್ಲಿ ಸ್ವಚ್ಚತೆ, ನೈರ್ಮಲ್ಯ ಇಲ್ಲವೇ ಇಲ್ಲ . ರೈತಭವನದಲ್ಲಿನ ಕೊಠಡಿಗಳ ಮೇಲ್ಚಾವಣಿ ಕಿತ್ತಬರುತ್ತಿದೆ ಅಲ್ಲದೆ ಶೌಚಾಲಯ ಸ್ವಚ್ಚತೆ ಇಲ್ಲದಿರುವ ಬಗ್ಗೆ ಗಮನಹರಿಸಿ ಕಾರ್ಯದರ್ಶಿಗೆ ಮೂಲಭೂತ ಸೌಲಭ್ಯಗಳನ್ನು ಅತಿ ಶೀಘ್ರವಾಗಿ ಸರಿಪಡಿಸುವಂತೆ ಸೂಚಿಸಿದರು.
ಹಾಗು ಈ ರಸ್ತೆಯಲ್ಲಿ ವಾಹನಗಳ ದಟ್ಟನೆಯಿಂದಾಗಿ ಸುಗಮವಾಗಿ ವಾಹನಗಳು ಸಂಚರಣೆ ಮಾಡಲು ಆಗುತ್ತಿಲ್ಲ ವಾಹನಗಳ ಸಂಚಾರವನ್ನು ಸರಿಪಡಿಸುವಂತೆ ಪೊಲೀಸ್ ಇನ್ಸ್ಪೆಕ್ಟರ್ ರವರಿಗೆ ಸೂಚಿಸಿದರು.
ಪುರಸಭೆಗೆ ಬೇಟಿ ನೀಡಿ ಪಟ್ಟಣದಲ್ಲಿ ಎಲ್ಲಾ ಬಡವಾಣೆಗಳ ಕಟ್ಟಡಗಳ, ಸೈಟ್ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಟ್ಯಾಕ್ಸ್ ಎಷ್ಟು ಕಟ್ಟಬೇಕು, ಎಷ್ಟು ಬಾಕಿ ಇದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಅನುಮಾನ ಸಿಬ್ಬಂದಿಯನ್ನು ಕರೆಸಿ, ಮೊಬೈಲ್ನಲ್ಲಿನ ಫೂನ್ಫೇ ಪರೀಶೀಲಿಸಿ ಒಂದು ವರ್ಷದ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ನೀಡುವಂತೆ ಹಾಗು ಆನ್ಲೈನ್ ಗೇಮ್ ಆಡುತ್ತಿದ್ದ ಸಿಬ್ಬಂದಿಯನ್ನು ಕರೆಸಿ ತರಾಟೆಗೆ ತೆಗದುಕೊಂಡರು. ಸ್ಥಳದಲ್ಲಿಯೇ ಇದ್ದ ಪುರಸಭೆ ಮುಖ್ಯಾಧಿಕಾರಿ ಇದೆನ್ನೆಲಾ ಸರಿಯಾಗಿ ನೋಡಿಕೊಳ್ಳುವಂತೆ ರೇಗಿದರು.
ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದವನ್ನು ಪರಿಶೀಲಿಸಿ , ಆವರಣದಲ್ಲಿ ಮಧ್ಯದ ಖಾಲಿ ಪಾಕೆಟ್ಗಳನ್ನು ನೋಡಿ ಕೆಂಡಾಮಂಡಲರಾಗಿ ವ್ಯವಸ್ಥಾಪಕ ವೇಣುಕುಮಾರ್ ತರಾಟೆಗೆ ತೆಗದುಕೊಂಡು ವಾಚ್ಮ್ಯಾನ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ತಿಳಿಸುತ್ತಾ ವಾಚ್ಮ್ಯಾನ್ ತಕ್ಷಣವೇ ಕೆಲಸದಿಂದ ವಜಾ ಮಾಡುವಂತೆ ಸೂಚಿಸಿದರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಆಲಿಸಿ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು.
ಅಬಕಾರಿ ಕಚೇರಿಗೆ ಬೇಟಿ ನೀಡಿ ತಾಲೂಕಿನಲ್ಲಿ ಕೆಲ ಹಳ್ಳಿಗಳಲ್ಲಿ ಶಾಲೆಗಳ ಪಕ್ಕದಲ್ಲಿಯೇ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಲ್ಲದೆ ಕೆಲ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದರೆ , ಬಾರ್ ನಿಗದಿತ ಸಮಯಕ್ಕೆ ತರೆಯದೆ ಅವಧಿಗೂ ಮುನ್ನಾ ಅಂಗಡಿ ತಗೆಯುತ್ತಿದ್ದು ಬಾರ್ ಮಾಲಿಕರಿಗೆ ನಿಗದಿತ ಸಮಯಕ್ಕೆ ಅಂಗಡಿ ತೆರಯುವಂತೆ ನೋಟೀಸ್ ನೀಡುವಂತೆ ಸೂಚಿಸಿ, ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಆಕ್ರಮ ಮಧ್ಯಮರಾಟವಾಗದಂತೆ ಅಬಕಾರಿ ಅಧಿಕಾರಿ ಪುಷ್ಪರವರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆ ಬೇಟಿ ನೀಡಿ ನಾನು ಈ ಹಿಂದೆ ಆಸ್ಪತ್ರೆಗೆ ಬೇಟಿ ನೀಡಿದ ಸಮಯದಲ್ಲಿ ತುಂಬಾ ಚೆನ್ನಾಗಿ ನಿರ್ವಹಿಸಲಾಗುತ್ತಿತ್ತು. ಆದರೆ ಇಂದು ಅವವ್ಯಸ್ಥೆಗಳ ಗೂಡಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತುಂಬಿ ತುಳುಕುತ್ತಿತ್ತು ಆದರೆ ಆಸ್ಪತ್ರೆಯಲ್ಲಿ ನಾಲ್ವರು ವೈದ್ಯರು ಇಲ್ಲದೆ ಸಾರ್ವಜನಿಕರು ಪರಿತಪಿಸುತ್ತಿದ್ದರು. ಅಲ್ಲದೆ ಔಷಧಿಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುತ್ತಿಲ್ಲ. ಔಷಧಿಗಳನ್ನು ಖಾಸಗಿ ಅಂಗಡಿ ತರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಡಿಎಚ್ಒ, ಟಿಎಚ್ಒ ರವರನ್ನು ದೂರವಾಣಿಯ ಮೂಲಕ ಸಂರ್ಪಕಿಸಿ ತಕ್ಷಣ ಈ ಆಸ್ಪತ್ರೆ ಸಿಬ್ಬಂದಿ ಹಾಗು ಔಷಧಿಯ ಕೊರತೆಯನ್ನು ಸರಿಪಡಿಸುವಂತೆ ಸೂಚಿಸಿದರು.
ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ಸಾರ್ವಜನಿಕರ ಕೆಲಸಗಳನ್ನು ನಿಗಧಿತ ಸಮಯಕ್ಕೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಸಾರ್ವಜನಿಕರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸಬೇಡಿ ಎಂದು ತರಾಟೆಗೆ ತೆಗದುಕೊಂಡು, ಸರ್ವ ಕಚೇರಿ, ದಾಖಲೆಗಳ ಕೊಠಡಿಗಳಿಗೆ ಬೇಟಿ ನೀಡಿ ಪರಿಶಿಲೀಸಿದರು.
ಪೊಲೀಸ್ಠಾಣೆಗೆ ಬೇಟಿ ನೀಡಿ ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಸಾರ್ವಜನಿಕರು ನಮ್ಮವರೆ ಎಂದು ಅರಿತು ಅವರ ಕೆಲಸ ಮಾಡಿಕೊಡಿ ಎಂದು ಪೊಲೀಸರಿಗೆ ಸೂಚನೆ ನೀಡಿದರು. ನಿನ್ನೆ (ಭಾನುವಾರ) ನಾಗದೇನಹಳ್ಳಿ ದೇವಾಲಯ ಧಾರ್ಮಿಕ ಕಾರ್ಯಕ್ರಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಲ್ಲ ಎಂದು ಕೆಂಡಾಮಂಡಲರಾದರು.
ಬಿಇಒ ಕಚೇರಿಗೆ ಬೇಟಿ ನೀಡಿ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಸಿಬ್ಬಂದಿಗೆ ತಿಳಿಸುತ್ತಾ, ಗ್ರಾಮೀಣ ಭಾಗದ ಶಾಲೆಗಳಿಗೆ ಬೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿ, ಶಿಕ್ಷಕರು ಶಾಲೆಗಳಿಗೆ ಹೋಗುವುದಕ್ಕಿಂತ ಹೆಚ್ಚು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗುಳ್ಳುತ್ತಾರೆ ಅವುಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಸ್ಕಾಂ ಇಲಾಖೆ ಬೇಟಿ ನೀಡಿ ವಿದ್ಯುತ್, ಸಂಪರ್ಕ ಹಾಗು ಟ್ರಾನ್ಸ್ಫಾರಂ ಹಾಕಿಕೊಡಲು ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದರು. ಕೃಷಿ ಇಲಾಖೆ ಬೇಟಿ ನೀಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಅನುದಾನಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ದಾಖಲೆಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಎಸ್ಪಿ ವಿ.ಧನಂಜಯ್, ಕೋಲಾರ ನ್ಯಾಯಾದೀಶ ಸುನಿಲ್ ಎಸ್. ಹೊಸಮಣಿ, ಲೋಕಾಯುಕ್ತ ನ್ಯಾಯಾದೀಶ ಎನ್.ವಿ.ಅರವಿಂದ್,ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ , ಪೊಲೀಸ್ ಇನ್ಸ್ಪೆಕ್ಟರ್ ಮಹ್ಮದ್ ಗೊರವನಕೊಳ್ಳ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಯಶ್ವಂತ್, ಆಂಜನಪ್ಪ ಹಾಗು ಸಿಬ್ಬಂದಿ ಇದ್ದರು.

